Daily Horoscope

Select Your Language

Notifications

webdunia
webdunia
webdunia
webdunia

ಈತ ಜೀವಮಾನದಲ್ಲಿ ಮತ್ತೆ ಕಳ್ಳತನ ಮಾಡಲ್ಲ, ಆ ಥರಾ ಬುದ್ಧಿ ಕಲಿಸಿದ ಅಂಗಡಿ ಮಾಲಿಕ Video

Viral video of robbery
Photo Credit: X
ಈ ಕಳ್ಳ ಇನ್ನು ಜೀವಮಾನದಲ್ಲಿ ಕಳ್ಳತನ ಮಾಡುವ ಮೊದಲು ಯೋಚನೆ ಮಾಡಬೇಕಾಗುತ್ತದೆ. ಆ ರೀತಿ ಈ ಅಂಗಡಿ ಮಾಲಿಕ ಬುದ್ಧಿ ಕಲಿಸಿದ್ದಾನೆ. ಈ ವೈರಲ್ ವಿಡಿಯೋ ಇಲ್ಲಿದೆ ನೋಡಿ.

ಹಾಡ ಹಗಲೇ ಅಂಗಡಿಗೆ ಬಂದು ಬೆದರಿಸಿ ಕಳ್ಳತನ ಮಾಡುವ ಖದೀಮರು ಕೆಲವೊಮ್ಮೆ ಯಾಮಾರಿಬಿಡುತ್ತಾರೆ. ಕಳ್ಳ ಎಷ್ಟೇ ನಿಪುಣನಾದರೂ ಜನರು ಚಾಣಕ್ಷ್ಯತನ ಮೆರೆದರೆ ಏನೂ ಮಾಡಲು ಸಾಧ್ಯವಿಲ್ಲ ಎಂಬುದಕ್ಕೆ ಈ ವಿಡಿಯೋವೇ ಸಾಕ್ಷಿಯಾಗಿದೆ.

ಖದೀಮನೊಬ್ಬ ಬಂದೂಕು ಹಿಡಿದುಕೊಂಡು ಹಾಡ ಹಗಲೇ ಅಂಗಡಿಯೊಂದಕ್ಕೆ ಬಂದು ಮಾಲಿಕನನ್ನು ಬೆದರಿಸಿ ಹಣವೆಲ್ಲಾ ತೆಗೆಯುವಂತೆ ಹೇಳುತ್ತಾನೆ. ಅದರಂತೆ ಅಂಗಡಿ ಮಾಲಿಕ ಮೊದಲು ತನ್ನ ಡ್ರಾಯರ್ ನಲ್ಲಿದ್ದ ಹಣವನ್ನೆಲ್ಲಾ ಬಾಚಿ ಕೊಡುತ್ತಾನೆ. ಇದೆಲ್ಲವನ್ನೂ ಕಳ್ಳ ಚೀಲವೊಂದಕ್ಕೆ ತುಂಬುತ್ತಾನೆ.

ಆದರೂ ಆತನಿಗೆ ಅನುಮಾನ. ಅಂಗಡಿಯಲ್ಲಿ ಬೇರೆ ಡ್ರಾಯರ್ ಇರಬಹುದು ಎಂದುಕೊಂಡು ಬೆದರಿಸುತ್ತಲೇ ಒಳಗೆ ಬರುತ್ತಾನೆ. ಈ ವೇಳೆ ಅಂಗಡಿ ಮಾಲಿಕ ಮತ್ತು ಆತನ ಸಹಾಯಕ ಉಪಾಯವಾಗಿ ಕಳ್ಳನನ್ನು ಹಿಡಿದು ಆತನ ಬಳಿಯಿದ್ದ ಹಣವನ್ನೆಲ್ಲಾ ಕಿತ್ತುಕೊಳ್ಳುತ್ತಾರೆ. ಈ ವೈರಲ್ ವಿಡಿಯೋ ಇಲ್ಲಿದೆ ನೋಡಿ.

pic.twitter.com/ILJ8KEQg3T

 

— HasnaZarooriHai???????? (@HasnaZaruriHai) April 16, 2026

Share this Story:

Follow Webdunia kannada

ಮುಂದಿನ ಸುದ್ದಿ

ದೇವಸ್ಥಾನಗಳಲ್ಲಿರುವ ಚಿನ್ನವನ್ನು ಸಾರ್ವಜನಿಕರಿಗೆ ಬಳಸಬೇಕು: ಫಾದರ್ ಪೌಲ್ ಥೆಲಕ್ಕಟ್ ಹೇಳಿಕೆಗೆ ಭಾರೀ ಆಕ್ರೋಶ video