Select Your Language

Notifications

webdunia
webdunia
webdunia
webdunia

ತಿರುಪತಿಗೆ ಕಾಲ್ನಡಿಗೆಯಲ್ಲಿ ಬೆಟ್ಟ ಹತ್ತುತ್ತಿದ್ದವರಿಗೆ ಶಾಕ್: ಆ ರಾತ್ರಿ ಅಲ್ಲಿ ನಡೆದಿದ್ದೇನು Video

Tirupati temple
Photo Credit: X
ತಿರುಪತಿ (ಆಂಧ್ರಪ್ರದೇಶ): ವಿಶ್ವಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ದರ್ಶನಕ್ಕೆ ತೆರಳುವ ಅಲಿಪಿರಿ ಕಾಲ್ನಡಿಗೆ ಮಾರ್ಗದಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿದ್ದು, ಮೆಟ್ಟಿಲು ಹತ್ತಿ ಸಾಗುತ್ತಿದ್ದ ಸಾವಿರಾರು ಭಕ್ತರಲ್ಲಿ ತೀವ್ರ ಆತಂಕ ಮತ್ತು ಭೀತಿಯ ವಾತಾವರಣ ನಿರ್ಮಾಣವಾಗಿದೆ.

ಶುಕ್ರವಾರದಂದು ನಡೆದಿರುವ ಈ ಘಟನೆಯಿಂದಾಗಿ ಕಾಲ್ನಡಿಗೆಯ ಮೂಲಕ ಬೆಟ್ಟ ಹತ್ತುವ ಯಾತ್ರಿಕರ ಸುರಕ್ಷತೆಯ ಕುರಿತು ಮತ್ತೆ ಆತಂಕ ವ್ಯಕ್ತವಾಗಿದೆ.

ಘಟನೆಯ ವಿವರ:
ವರದಿಗಳ ಪ್ರಕಾರ, ಅಲಿಪಿರಿ ಮಾರ್ಗದ ಪ್ರಮುಖ ಕೇಂದ್ರವಾದ ಲಕ್ಷ್ಮಿ ನರಸಿಂಹ ಸ್ವಾಮಿ ದೇವಾಲಯದ ಸಮೀಪ ಚಿರತೆ ಕಾಣಿಸಿಕೊಂಡಿದೆ.

ಭಕ್ತರ ಕಿರುಚಾಟ: ದಾರಿಯಲ್ಲಿ ತೆರಳುತ್ತಿದ್ದ ಭಕ್ತರ ಗುಂಪೊಂದು ದೇವಾಲಯದ ಹತ್ತಿರವೇ ಚಿರತೆ ಸಂಚರಿಸುತ್ತಿರುವುದನ್ನು ಗಮನಿಸಿ ಜೋರಾಗಿ ಕಿರುಚಿ ಉಳಿದ ಭಕ್ತರನ್ನು ಎಚ್ಚರಿಸಿದೆ. ಇದರಿಂದಾಗಿ ಕೆಲಕಾಲ ಮಾರ್ಗದಲ್ಲಿ ಗೊಂದಲ ಹಾಗೂ ಭಯದ ವಾತಾವರಣ ಉಂಟಾಯಿತು.

ಅರಣ್ಯ ಇಲಾಖೆ ಕಾರ್ಯಪಡೆ: ಮಾಹಿತಿ ತಿಳಿಯುತ್ತಿದ್ದಂತೆಯೇ ತಕ್ಷಣವೇ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆ  ಸಿಬ್ಬಂದಿಗಳು ಸ್ಥಳಕ್ಕೆ ದಾವಿಸಿದ್ದಾರೆ. ಮೆಟಲ್ ರಾಡ್‌ಗಳಿಂದ ಭಾರಿ ಶಬ್ದ ಮಾಡುವ ಮೂಲಕ ಚಿರತೆಯನ್ನು ಮತ್ತೆ ದಟ್ಟ ಅರಣ್ಯದೊಳಗೆ ಓಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಭಕ್ತರಿಗೆ ಜಾಗರೂಕತೆಯ ಸೂಚನೆ :
ಚಿರತೆ ಪ್ರತ್ಯಕ್ಷವಾದ ಹಿನ್ನೆಲೆಯಲ್ಲಿ ಟಿಟಿಡಿ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಕಾಲ್ನಡಿಗೆಯಲ್ಲಿ ತೆರಳುವ ಭಕ್ತರಿಗೆ ಪ್ರಮುಖ ಸೂಚನೆಗಳನ್ನು ನೀಡಿದ್ದಾರೆ:

ಒಂಟಿಯಾಗಿ ಪ್ರಯಾಣಿಸಬೇಡಿ: ಕಾಲ್ನಡಿಗೆ ಮಾರ್ಗದಲ್ಲಿ ಯಾರೂ ಒಂಟಿಯಾಗಿ ನಡೆಯಬಾರದು. ಕಡ್ಡಾಯವಾಗಿ ಗುಂಪುಗಳಲ್ಲಿ  ಪ್ರಯಾಣಿಸಬೇಕು.

ಸುರಕ್ಷತಾ ಮಾನದಂಡ: ವಿಶೇಷವಾಗಿ ಮಕ್ಕಳು ಮತ್ತು ವೃದ್ಧರ ಜೊತೆ ತೆರಳುವಾಗ ಹೆಚ್ಚಿನ ಜಾಗ್ರತೆ ವಹಿಸಬೇಕು ಮತ್ತು ಅಧಿಕಾರಿಗಳು ಸೂಚಿಸಿದ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಬೇಕು.

pic.twitter.com/fdGfVfvMGK

— Karnataka Portfolio (@karnatakaportf) July 11, 2026

Share this Story:

Follow Webdunia kannada

ಮುಂದಿನ ಸುದ್ದಿ

ಬಡವರಿಗೆ ಕೇಂದ್ರ ಸರ್ಕಾರದಿಂದ ಬಂಪರ್ ಕೊಡುಗೆ: ಈ ಪ್ರಮುಖ ಖಾಯಿಲೆಗಳ ಔಷಧಿಗಳ ಬೆಲೆ ಭಾರೀ ಇಳಿಕೆ