Publish Date: Sat, 11 Jul 2026 (10:39 IST)
Updated Date: Sat, 11 Jul 2026 (10:47 IST)
ಹೈದರಾಬಾದ್ (ತೆಲಂಗಾಣ): ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಅತ್ಯಂತ ಭೀಕರ ಹಾಗೂ ಆಘಾತಕಾರಿ ಘಟನೆಯೊಂದು ನಡೆದಿದ್ದು, POCSO (ಪೋಕ್ಸೋ) ಪ್ರಕರಣದ ಆರೋಪಿಯೊಬ್ಬ ಜಮೀನಿನಿಂದ ಹೊರಬಂದು ಕೇವಲ ಒಂದೇ ರಾತ್ರಿಯಲ್ಲಿ ಒಟ್ಟು 6 ಜನರನ್ನು ದಾರುಣವಾಗಿ ಕೊಲೆ ಮಾಡಿದ್ದಾನೆ.
ತನ್ನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿದ್ದ ಸಂತ್ರಸ್ತೆ ಬಾಲಕಿ, ಆಕೆಯ ತಾಯಿ,ಜ್ಜಿ ಮತ್ತು ತನ್ನದೇ ಹೆಂಡತಿ ಹಾಗೂ ಇಬ್ಬರು ಪುಟ್ಟ ಮಕ್ಕಳನ್ನು ಈತ ಕೊಂದು ಪರಾರಿಯಾಗಿದ್ದಾನೆ.
ಆರೋಪಿಯ ವಿರುದ್ಧ ಕಳೆದ ಮೇ ತಿಂಗಳಲ್ಲಿ 16 ವರ್ಷದ ಬಾಲಕಿಯನ್ನು ಹಿಂಬಾಲಿಸಿದ ಆರೋಪದ ಮೇಲೆ ಶಾಬಾದ್ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿತ್ತು. ನಂತರ ಈತ ಜಾಮೀನಿನ ಮೇಲೆ ಹೊರಬಂದಿದ್ದನು. ತನ್ನ ವಿರುದ್ಧ ದೂರು ನೀಡಿದ್ದಾರೆ ಎಂಬ ಕಡುಕ ದ್ವೇಷ ಹಾಗೂ ಹತಾಶೆಯಿಂದ ಈ ಭೀಕರ ಕೃತ್ಯವೆಸಗಿದ್ದಾನೆ ಎನ್ನಲಾಗಿದೆ.
ಸಂತ್ರಸ್ತೆಯ ಕುಟುಂಬದ ಕೊಲೆ: ಶುಕ್ರವಾರ ರಾತ್ರಿ 10:45 ರ ಸುಮಾರಿಗೆ ಕಾರಿನಲ್ಲಿ ಬಂದ ಆರೋಪಿ, ಬಾಲಕಿಯ ಮನೆಗೆ ನುಗ್ಗಿ ಬಾಗಿಲು ತೆರೆದ ಆಕೆಯ ತಾಯಿ ಮತ್ತು ಮಲಗಿದ್ದ ಅಜ್ಜಿಯನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ. ನಂತರ ಬಾಲಕಿಯನ್ನು ಬಲವಂತವಾಗಿ ತನ್ನ ಕಾರಿನಲ್ಲಿ ಅಪಹರಿಸಿ, ಕೆರೆಯ ದಂಡೆಯ ಬಳಿ ಕೊಂಡೊಯ್ದು ಕೊಲೆ ಮಾಡಿದ್ದಾನೆ.
ತನ್ನದೇ ಹೆಂಡತಿ ಮತ್ತು ಮಕ್ಕಳ ಮಾರಣಹೋಮ: ಆ ಬಳಿಕ ರಾತ್ರಿ 11:21 ಕ್ಕೆ ತನ್ನ ಮನೆಗೆ ತೆರಳಿದ ಆರೋಪಿ, ಅಲ್ಲಿ ನಿದ್ರಿಸುತ್ತಿದ್ದ ತನ್ನ 31 ವರ್ಷದ ಹೆಂಡತಿ ಮತ್ತು 4 ವರ್ಷ ಹಾಗೂ 18 ತಿಂಗಳ ಇಬ್ಬರು ಪುಟ್ಟ ಗಂಡು ಮಕ್ಕಳ ಕುತ್ತಿಗೆ ಸೀಳಿ ಭೀಕರವಾಗಿ ಹತ್ಯೆ ಮಾಡಿದ್ದಾನೆ.
ಕೊಲೆಗಳನ್ನು ನಡೆಸಿದ ನಂತರ ಆರೋಪಿ ತನ್ನ ತಂದೆಗೆ ಫೋನ್ ಮಾಡಿ ವಿಷಯ ತಿಳಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ. ಒಂದೇ ರಾತ್ರಿಯಲ್ಲಿ ನಡೆದ ಈ 6 ಹತ್ಯೆಗಳಿಂದ ಇಡೀ ತೆಲಂಗಾಣ ಬೆಚ್ಚಿಬಿದ್ದಿದ್ದು, ಪೊಲೀಸರು ಆರೋಪಿಯ ಬಂಧನಕ್ಕಾಗಿ ಬೃಹತ್ ಕಾರ್ಯಾಚರಣೆ ಆರಂಭಿಸಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ