Publish Date: Fri, 10 Jul 2026 (20:06 IST)
Updated Date: Fri, 10 Jul 2026 (20:14 IST)
ಕಳ್ಳತನ ಮಾಡಲು ಕಟ್ಟಡ ಹತ್ತಿದ ಕಳ್ಳನೊಬ್ಬ ರಾತ್ರಿಯೆಲ್ಲಾ ಅಲ್ಲೇ ಸಿಲುಕಿಕೊಂಡಿರುವ ಘಟನೆ ನಡೆದಿದೆ. ಇದರ ವಿಡಿಯೋ ಕೂಡಾ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಕಟ್ಟಡದ ಹೊರಗೆ ಸಿಲುಕಿರುವುದನ್ನು ಕಂಡು ಸ್ಥಳೀಯರು ಅವನನ್ನು ರಕ್ಷಿಸಿ, ಊಟ ಹಾಕಿ, ಅಪರಾಧದ ಹಾದಿ ಬಿಡುವಂತೆ ಬುದ್ಧಿವಾದ ಹೇಳಿ, ಮನೆಗೆ ಹೋಗಲು ಟ್ಯಾಕ್ಸಿ ಮಾಡಿ ಅವರೇ ಅದರ ಹಣವನ್ನು ನೀಡಿರುವ ಘಟನೆ ವರದಿಯಾಗಿದೆ.
ಕಳ್ಳನೊಬ್ಬ ರಾತ್ರಿ ಕದಿಯಲು ಮೂರನೇ ಮಹಡಿಯ ಸನ್ ಶೇಡ್ ಹತ್ತಿದ್ದಾನೆ. ಆದರೆ ಅಲ್ಲಿಂದ ಕೆಳಗೆ ಇಳಿಯಲು ಅಥವಾ ಮೇಲೆ ಹೋಗಲು ಸಾಧ್ಯವಾಗದೆ ಇಡೀ ರಾತ್ರಿ ಅಲ್ಲೇ ಸಿಲುಕಿಕೊಂಡಿದ್ದಾನೆ.
ಮುಂಜಾನೆ ಸ್ಥಳೀಯರು ಇದನ್ನು ಗಮನಿಸಿ, ಪೊಲೀಸರು ಮತ್ತು ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ಅವನನ್ನು ಸುರಕ್ಷಿತವಾಗಿ ಕೆಳಗೆ ಇಳಿಸಿದರು.
ಅವನು ಹಸಿವಿನಿಂದ ಬಳಲಿರುವುದನ್ನು ಕಂಡು ಅಲ್ಲಿನ ಜನರೇ ಅವನಿಗೆ ತಿಂಡಿ-ಕಾಫಿ ಕೊಡಿಸಿದರು. ನಂತರ ಕೈಗೆ ಸ್ವಲ್ಪ ಹಣ ಕೊಟ್ಟು, "ಇನ್ನೊಮ್ಮೆ ಈ ತರಹ ಕಳ್ಳತನ ಮಾಡಬೇಡ, ಚೆನ್ನಾಗಿ ಬದುಕು" ಎಂದು ಬುದ್ಧಿವಾದ ಹೇಳಿ ಆಟೋ/ಟ್ಯಾಕ್ಸಿ ಮಾಡಿಸಿ ಮನೆಗೆ ಕಳುಹಿಸಿಕೊಟ್ಟರು.
ಇಂತಹ ಘಟನೆಗಳು ಮನುಷ್ಯತ್ವ ಇನ್ನು ಬದುಕಿಸಿದೆ ಎಂದು ತೋರಿಸಿಕೊಡುತ್ತದೆ.
About Writer
ಸಂಪ್ರಿಯ
ಕನ್ನಡ ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷದಲ್ಲಿ ಬೇರೆ ಬೇರೆ ಸಂಸ್ಥೆಗಳಲ್ಲಿ ರಿಪೋರ್ಟರ್ ಆಗಿ, ಸಬ್ ಎಡಿಟರ್ ಆಗಿ, ಇದೀಗ ಕಂಟೆಂಟ್ ರೈಟರ್ ಆಗಿ ವೆಬ್ದುನಿಯಾದಲ್ಲಿ ಕೆಲಸ. ಆಳ್ವಾಸ್ ಕಾಲೇಜಿನಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋಧ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು 2016ನೇ ಸಾಲಿನಲ್ಲಿ ಪಡೆದಿರುತ್ತೇನೆ. ಮನರಂಜನೆ, ಲೈಫ್ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ವಿಶೇಷ ಆಸಕ್ತಿ. ....
ಮತ್ತಷ್ಟು ಓದಿ