Publish Date: Tue, 28 Jul 2026 (11:25 IST)
Updated Date: Tue, 28 Jul 2026 (11:43 IST)
ಜೈಪುರ: ಮಗಳು ಓಡಿ ಹೋಗಿ ತನ್ನ ಪ್ರಿಯಕರನ ಜೊತೆ ಮದುವೆಯಾದ ಸುದ್ದಿ ತಿಳಿದ ಬಳಿಕ ತಂದೆ ನಡೆದುಕೊಂಡ ರೀತಿ ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಘಟನೆ ಪ್ರತಿಯೊಬ್ಬರ ಕಣ್ಣಂಚಿನಲ್ಲಿ ನೀರು ತರಿಸುವಂತಿದೆ. ಮಗಳು ತಂದೆಗೆ ತಿಳಿಸದೇ ದೇವಸ್ಥಾನದಲ್ಲಿ ತನ್ನ ಪ್ರೇಮಿಯನ್ನು ರಹಸ್ಯವಾಗಿ ಮದುವೆಯಾದ ಸುದ್ದಿ ತಿಳಿದು ಓಡಿಬಂದ ತಂದೆ, ಯಾವುದೇ ಗಲಾಟೆ ಮಾಡದೇ, ಹಿಂಸೆಗೆ ಇಳಿಯದೇ ಅತ್ಯಂತ ಭಾವನಾತ್ಮಕವಾಗಿ ನಡೆದುಕೊಂಡ ಪರಿ ನೆಟ್ಟಿಗರ ಮನ ಗೆದ್ದಿದೆ.
ದೇವಸ್ಥಾನದಲ್ಲಿ ನಡೆದ ಘಟನೆ ಏನು
ರಾಜಸ್ಥಾನದಲ್ಲಿ ಯುವತಿಯೊಬ್ಬಳು ತನ್ನ ಕುಟುಂಬಕ್ಕೆ ತಿಳಿಸದೇ ಪ್ರೇಮಿಯೊಂದಿಗೆ ದೇವಸ್ಥಾನದಲ್ಲಿ ಮದುವೆಯಾಗಿದ್ದಳು. ಸುದ್ದಿ ತಿಳಿಯುತ್ತಿದ್ದಂತೆ ಆಘಾತದಿಂದ ದೇವಸ್ಥಾನಕ್ಕೆ ಧಾವಿಸಿದ ತಂದೆ, ಮಗಳ ಮದುವೆ ನಡೆದಿರುವುದನ್ನು ನೋಡಿ ಕಣ್ಣೀರು ಹಾಕುತ್ತಾ ಸ್ತಬ್ಧರಾದರು. ಯಾವುದೇ ಆರ್ಭಟ ಮಾಡದ ಅವರು, ಮನಸ್ಸಿನಲ್ಲೇ ದುಃಖವನ್ನು ನುಂಗಿ, ವರನ ಕುಟುಂಬದ ಬಳಿ ತೆರಳಿ ಕಣ್ಣೀರಿನಿಂದಲೇ ಹೇಳಿದರು:
"ನನ್ನ ಮಗಳನ್ನು ಸಂತೋಷವಾಗಿ ನೋಡಿಕೊಳ್ಳಿ. ಆದರೆ ನೆನಪಿರಲಿ... ಆಕೆಗೆ ಎಂದಾದರೂ ನೋವುಂಟು ಮಾಡಿದರೆ ನಾನು ಯಾರನ್ನೂ ಸುಮ್ಮನೆ ಬಿಡುವುದಿಲ್ಲ!"
ಎಷ್ಟೇ ನೋವಾದರೂ ಮಗಳ ಭವಿಷ್ಯ ಮತ್ತು ಆಕೆಯ ಗೌರವಕ್ಕೆ ಧಕ್ಕೆ ಬಾರದಂತೆ ನಿರ್ಗಮಿಸಲು ಅವಕಾಶ ಮಾಡಿಕೊಟ್ಟ ಈ ತಂದೆಯ ನಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ