Select Your Language

Notifications

webdunia
webdunia
webdunia
webdunia

ಪವಿತ್ರ ಗಂಗಾ ನದಿ ಹಾಳು ಮಾಡಲು ಇಂಥವರು ಇದ್ರೆ ಸಾಕು: Video

Ganga river viral video
Photo Credit: X
ನವದೆಹಲಿ: ಪವಿತ್ರ ಗಂಗಾ ನದಿ ಹಾಳು ಮಾಡಲು ಇಂಥವರು ಇದ್ದರೆ ಸಾಕು. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವಿಡಿಯೋ ನೋಡಿದ್ರೆ ನಿಮಗೂ ಮೈ ಉರಿಯುತ್ತೆ.

ಗಂಗಾ ನದಿಯನ್ನು ಪವಿತ್ರ ನದಿ ಎಂದು ಪೂಜಿಸುತ್ತೇವೆ. ಗಂಗಾ ನದಿಯಲ್ಲಿ ಸ್ನಾನ ಮಾಡಿದರೆ ಪಾಪಗಳೆಲ್ಲಾ ಕಳೆದು ಹೋಗುವುದು ಎಂದುಕೊಳ್ಳುತ್ತೇವೆ. ಗಂಗಾ ನದಿಯ ನೀರು ಸೇವನೆ ಮಾಡುತ್ತೇವೆ. ಆದರೆ ಅದೇ ಗಂಗಾ ನದಿಯನ್ನು ಮಲಿನಗೊಳಿಸಿರುವುದೂ ಜನರೇ. ಇತ್ತೀಚೆಗಿನ ಕೆಲವು ವರ್ಷಗಳಲ್ಲಿ ಮೋದಿ ಸರ್ಕಾರ ಗಂಗಾ ನದಿ ಸ್ವಚ್ಛತೆಗಾಗಿ ಹಲವು ಕಾರ್ಯಕ್ರಮಗಳನ್ನು ಮಾಡಿತ್ತು.

ಆದರೆ ಸ್ವಚ್ಛತೆ ಎನ್ನುವುದು ನಮ್ಮ ದೇಶದ ಕೆಲವರಿಗೆ ಎಷ್ಟು ಹೇಳಿದರೂ ಅರ್ಥವೇ ಆಗದ ವಿಚಾರವೆನಿಸುತ್ತದೆ. ಗಂಗಾ ನದಿಯಲ್ಲಿ ಕಸ ಬಿಸಾಕುವುದು ಒಂದು ಕಡೆಯಾದರೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ಕೆಲವರು ಗಂಗಾ ನದಿಯ ತಟದಲ್ಲಿ ಕೂತು ಮದ್ಯ ಸೇವಿಸಿ ನದಿಗೇ ಬಿಡುತ್ತಿದ್ದಾರೆ.

ಗಂಗಾ ನದಿಯ ಸುಂದರ ಪ್ರಕೃತಿ ಸೌಂದರ್ಯದ ತಟದಲ್ಲಿ ಕುಳಿತುಕೊಂಡು ಇವರು ಮಾಡುವ ಕೆಲಸವನ್ನು ಕೆಲವರು ಪ್ರಶ್ನೆ ಮಾಡುತ್ತಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನಮ್ಮ ಜನಕ್ಕೆ ಯಾವತ್ತೂ ಬುದ್ಧಿ ಬರಲ್ಲ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

pic.twitter.com/ngpdx3qdz3

 

— Suraj Kumar Bauddh (@SurajKrBauddh) February 25, 2026

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಮೋದಿಗಾಗಿ ಭಾರತಿಯ ಉಡುಗೆ ತೊಟ್ಟ ಇಸ್ರೇಲ್ ಪ್ರಧಾನಿ ನೆತನ್ಯಾಹು: ವಿಡಿಯೋ