Daily Horoscope

Select Your Language

Notifications

webdunia
webdunia
webdunia
webdunia

Video: ಹುಡುಗೀರು ಬೇಕಾ, ಒಳ್ಳೆ ರೂಂ ಇದೆ ಸಾರ್.. ಆಟೋ ಡ್ರೈವರ್ ಆಫರ್ ಗೆ ಬೆಚ್ಚಿ ಬಿದ್ದ ವಿದೇಶಿಗ

Auto driver video
Photo Credit: X
ನವದೆಹಲಿ: ಮಲಗಲು ಹುಡಗೀರು ಬೇಕಾ ಸಾರ್.. ಎಲ್ಲಾ ಫ್ರೆಶ್, ಜಸ್ಟ್ 18 ರಿಂದ 20 ವರ್ಷದವರು. ಬನ್ನಿ ಕರ್ಕೊಂಡು ಹೋಗ್ತೀನಿ ಸಾರ್.. ಹೀಗಂತ ಆಟೋ ಚಾಲಕ ಆಫರ್ ಮಾಡುತ್ತಿದ್ದರೆ ವಿದೇಶಿಗ ಬೆಚ್ಚಿಬಿದ್ದಿದ್ದಾನೆ.

ಇದು ನಡೆದಿರುವು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ. ಸೆಕ್ಸ್ ದಂಧೆ ಎನ್ನುವುದು ಇತ್ತೀಚೆಗೆ ಹಣ್ಣು-ತರಕಾರಿ ಮಾರುವ ರೇಂಜ್ ಗೆ ಬಂದು ನಿಂತಿದೆ. ಹೆಣ್ಣು ಮಕ್ಕಳು ಮಾರಾಟದ ವಸ್ತುಗಳಾಗಿದ್ದಾರೆ. ಇದಕ್ಕೆ ಈ ಘಟನೆಯೇ ಸಾಕ್ಷಿ.

ವಿದೇಶಿಗರೊಬ್ಬರು ತಮಗಾದ ಅನುಭವದ ವಿಡಿಯೋ ಮಾಡಿಕೊಂಡಿದ್ದಾರೆ. ಆ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆಟೋದಲ್ಲಿ ಪ್ರಯಾಣ ಮಾಡಲು ಆಟೋ ಹತ್ತಿದ್ದ ವಿದೇಶೀಯನನ್ನು ನೋಡಿ ಚಾಲಕ ಇಲ್ಲೇ ಜಸ್ಟ್ 20 ನಿಮಿಷ ದೂರ ಚೆನ್ನಾಗಿರೋ ಹುಡುಗೀರು ಇದ್ದಾರೆ. ಕೇವಲ 18-20 ವರ್ಷ ವಯಸ್ಸಿನವರು. ಒಳ್ಳೆ ರೂಂ ಕೂಡಾ ಇದೆ ಸಾರ್. ನಾನು 20 ನಿಮಿಷದಲ್ಲಿ ಹುಡುಗಿಯನ್ನು ಅರೇಂಜ್ ಮಾಡಿ ಕೊಡ್ತೀನಿ ಎಂದು ಆಟೋ ಚಾಲಕ ಹೇಳುತ್ತಾನೆ.

ಇದಕ್ಕೆ ವಿದೇಶಿಗ ಬೇಡ ಎಂದರೂ ಕೇಳದೇ ಆತ ಅಲ್ಲಿಗೆ ಕರೆದುಕೊಂಡು ಹೋಗಲು ನೋಡುತ್ತಾನೆ. ಆದರೆ ವಿದೇಶಿಗ ಬೇಡ ಬೇಡ ಎಂದು ಖಡಾ ಖಂಡಿತವಾಗಿ ಹೇಳುತ್ತಾನೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಭಾರತ ಸಾಂಪ್ರದಾಯಿಕ ರಾಷ್ಟ್ರ ಎನ್ನುವ ಕಲ್ಪನೆ ವಿದೇಶೀಯರಲ್ಲಿದೆ. ಆದರೆ ಇಂತಹ ಘಟನೆಗಳು ದೇಶದ ಮಾನವನ್ನೇ ಹರಾಜು ಹಾಕುವಂತದ್ದಾಗಿದೆ.

pic.twitter.com/ph9zUfH53G

 

— Suraj Kumar Bauddh (@SurajKrBauddh) February 25, 2026

Share this Story:

Follow Webdunia kannada

ಮುಂದಿನ ಸುದ್ದಿ

Karnataka Weather: ಕರ್ನಾಟಕದ ಇಂದಿನ ಹವಾಮಾನ ವರದಿ ಇಲ್ಲಿದೆ