Select Your Language

Notifications

webdunia
webdunia
webdunia
webdunia

ಆಂಜನೇಯನ ವಿಗ್ರಹಕ್ಕೆ ಹೊಡೆಯಲು ಹೋದ ವ್ಯಕ್ತಿ: ಮುಂದೆ ನಡೆದಿದ್ದು ನಿಜಕ್ಕೂ ಪವಾಡ Video

Anjaneya statue
Photo Credit: X
ದುಷ್ಕರ್ಮಿಯೊಬ್ಬ ದೇವಾಲಯವೊಂದರಲ್ಲಿ ಆಂಜನೇಯನ ವಿಗ್ರಹಕ್ಕೆ ಕೋಲು ತೆಗೆದುಕೊಂಡು ಬಾರಿಸಲು ಹೋಗಿದ್ದು ಈ ವೇಳೆ ನಡೆದ ಘಟನೆ ನಿಜಕ್ಕೂ ಪವಾಡ ಎಂದೇ ಹೇಳಬಹುದು.
 

ಹಿಂದೂ ಆಸ್ತಿಕರ ಪ್ರಕಾರ ಈಗಲೂ ಆಂಜನೇಯ ಸ್ವಾಮಿ ಜೀವಂತವಾಗಿದ್ದಾನೆ. ಕಲಿಯುಗ ಮುಗಿಯುವವರೆಗೂ ಆಂಜನೇಯ ಬುದಕಿರುವಂತೆ ಸ್ವತಃ ಶ್ರೀರಾಮ ಚಂದ್ರ ಅನುಗ್ರಹ ಮಾಡಿದ್ದಾನೆ ಎಂದು ನಂಬಲಾಗುತ್ತದೆ. ಕೆಲವೊಂದು ಘಟನೆಗಳನ್ನು ನೋಡಿದರೆ ಅದು ನಿಜವೇನೋ ಎನಿಸುತ್ತದೆ.

ಅಂತಹದ್ದೇ ಒಂದು ಘಟನೆ ಇದಾಗಿದೆ. ಓರ್ವ ದುಷ್ಕರ್ಮಿ ದೇವಾಲಯದೊಳಗೆ ದೊಡ್ಡ ದೊಣ್ಣೆ ಹಿಡಿದುಕೊಂಡು ಬರುತ್ತಾನೆ. ಬಳಿಕ ಆಂಜನೇಯ ಸ್ವಾಮಿಯ ವಿಗ್ರಹಕ್ಕೆ ಹೊಡೆಯುತ್ತಾನೆ. ಅಷ್ಟರಲ್ಲಿ ಅದೆಲ್ಲಿತ್ತೋ ಒಂದು ಕೋತಿ ಥಟ್ಟನೆ ಹಾರಿಬರುತ್ತದೆ.

ನೇರವಾಗಿ ದುಷ್ಕರ್ಮಿಯ ಮೇಲೆ ಹಾರಿ ಆತನನ್ನು ನೆಲಕ್ಕುರುಳಿಸುತ್ತದೆ. ಅಷ್ಟಕ್ಕೇ ಸುಮ್ಮನಾಗುವುದಿಲ್ಲ. ಆತನನ್ನು ಹಣ್ಣುಗಾಯಿ-ನೀರುಗಾಯಿ ಮಾಡಿಬಿಡುತ್ತದೆ. ಇದನ್ನು ನೋಡಿ ನೆಟ್ಟಿಗರು ಇದು ಆಂಜನೇಯನದ್ದೇ ಪವಾಡವಿರಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಈ ವಿಡಿಯೋ ಇಲ್ಲಿದೆ ನೋಡಿ.


Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಮೋದಿ ವಿಡಿಯೋವನ್ನೇ ಬ್ಲಾಕ್ ಮಾಡ್ತೀರಾ: ಮೆಟಾ ವಿರುದ್ಧ ಸೈಬರ್ ಪೊಲೀಸರ ಖಡಕ್ ಕ್ರಮ