Publish Date: Wed, 18 Mar 2026 (13:43 IST)
Updated Date: Wed, 18 Mar 2026 (13:47 IST)
ಜೈಂಟ್ ವೀಲ್ ನಲ್ಲಿ ಕುಳಿತು ಸಾಕಷ್ಟು ಜನ ನೋಡುತ್ತಿರುವಾಗಲೇ ಓರ್ವ ವ್ಯಕ್ತಿ ಮೂತ್ರ ವಿಸರ್ಜಿಸಿದ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋಗೆ ಕಾಮೆಂಟ್ ಮಾಡಿರುವ ನೆಟ್ಟಿಗರು ಸ್ವಲ್ಪವೂ ಮ್ಯಾನರ್ಸ್ ಇಲ್ವಾ ಎಂದಿದ್ದಾರೆ.
ನಮ್ಮ ದೇಶದಲ್ಲಿ ಕೆಲವರಿಗೆ ಎಷ್ಟೇ ವಿದ್ಯಾಭ್ಯಾಸವಿದ್ದರೂ ಸಾರ್ವಜನಿಕವಾಗಿ ಹೇಗೆ ನಡೆದುಕೊಳ್ಳಬೇಕು ಎಂಬುದೇ ಗೊತ್ತಿಲ್ಲ. ಗೊತ್ತಿದ್ದೂ ಯಾರು ಏನು ಮಾಡುತ್ತಾರೆ ಎಂಬ ದರ್ಪ. ಇದೇ ರೀತಿ ಈ ವ್ಯಕ್ತಿಯೂ ಮಾಡಿದ್ದಾನೆ.
ಜೈಂಟ್ ವೀಲ್ ನಲ್ಲಿ ಸಾಕಷ್ಟು ಜನ ಕುಳಿತಿದ್ದಾರೆ. ಎಲ್ಲಾ ಸೀಟ್ ಗಳೂ ಭರ್ತಿಯಾಗಿವೆ. ಕೆಳಗಡೆಯೂ ಸಾಕಷ್ಟು ಜನ ನೋಡುತ್ತಾ ನಿಂತಿದ್ದಾರೆ. ಇನ್ನೂ ಜೈಂಟ್ ವೀಲ್ ಚಾಲೂ ಆಗಿರುವುದಿಲ್ಲ. ಆಗ ಮೇಲೆ ಒಂದು ಕ್ಯಾಬಿನ್ ನಲ್ಲಿ ಕೂತಿದ್ದ ವ್ಯಕ್ತಿ ಇದ್ದಕ್ಕಿದ್ದಂತೆ ಮೇಲಿನಿಂದ ಮೂತ್ರ ವಿಸರ್ಜಿಸುತ್ತಾನೆ.
ಈತ ಬೇಕೆಂದೇ ಈ ರೀತಿ ಮಾಡಿದ್ದಾನೋ, ಗೊತ್ತಿಲ್ಲದೇ ಮಾಡಿದ್ದಾನೋ ಗೊತ್ತಿಲ್ಲ. ಆದರೆ ಮೇಲಿನಿಂದ ಈ ರೀತಿ ಮೂತ್ರ ವಿಸರ್ಜಿಸಿದರೆ ಕೆಳಗಿದ್ದವರ ಮೇಲೆ ಬೀಳುತ್ತದೆ ಎನ್ನುವುದು ಎಂಥಾ ಅಜ್ಞಾನಿಗಾದರೂ ಗೊತ್ತಾಗುತ್ತದೆ. ಆದರೆ ಈ ಭೂಪ ಅದನ್ನೂ ಮರೆತು ನಡೆದುಕೊಂಡಿದ್ದಾನೆ. ಇಂತಹವರ ವಿರುದ್ಧ ತಕ್ಕ ಕ್ರಮ ಕೈಗೊಳ್ಳಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.