Select Your Language

Notifications

webdunia
webdunia
webdunia
webdunia

ಗನ್ ಹಿಡಿದು ರೀಲ್ಸ್ ಮಾಡಲು ಹೊರಟವ ಮಿಸ್ ಫೈರ್ ಆಗಿ ಲೈವ್ ನಲ್ಲೇ ಸಾವು: ಭಯಾನಕ Video

Viral video Delhi man gun reels
Photo Credit: X
ನವದೆಹಲಿ: ಗನ್ ಹಿಡಿದುಕೊಂಡು ಎದೆಗೆ ಗುರಿಯಿಟ್ಟುಕೊಂಡು ರೀಲ್ಸ್ ಮಾಡಲು ಹೊರಟಿದ್ದ ಪವನ್ ಕುಮಾರ್ ಎಂಬ ವ್ಯಕ್ತಿಗೆ ಲೈವ್ ನಲ್ಲೇ ಮಿಸ್ ಫೈರ್ ಆಗಿ ಸಾವನ್ನಪ್ಪಿದ್ದ ಭಯಾನಕ ವಿಡಿಯೋ ಇಲ್ಲಿದೆ ನೋಡಿ.

ಇತ್ತೀಚೆಗೆ ಯುವ ಜನಾಂಗ ರೀಲ್ಸ್ ಹುಚ್ಚಿಗೆ ಏನೇನೋ ಸಾಹಸ ಮಾಡಲು ಹೋಗುತ್ತಾರೆ. ಇದರಿಂದ ಅನೇಕ ಬಾರಿ ತಮ್ಮ ಪ್ರಾಣಕ್ಕೇ ಕುತ್ತು ತರುತ್ತಾರೆ. ಇದೇ ರೀತಿ ಪವನ್ ಕುಮಾರ್ ಕೂಡಾ ರಿವಾಲ್ವರ್ ಬಳಸಿ ರೀಲ್ಸ್ ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿದ್ದಾರೆ.

ದೆಹಲಿಯಲ್ಲಿ ಈ ಘಟನೆ ನಡೆದಿದೆ. ಪವನ್ ಕುಮಾರ್ ಎಂಬ 28 ವರ್ಷದ ಈ ಯುವಕ ಸಿನಿಮಾ ಶೈಲಿಯಲ್ಲಿ ತನ್ನ ಗೆಳೆಯನ ರಿವಾಲ್ವರ್ ಹಿಡಿದು ಮದ್ದುಗುಂಡು ಲೋಡ್ ಮಾಡಿಕೊಂಡು ಎದೆ ಗುರಿಯಿಟ್ಟುಕೊಂಡು ರೀಲ್ಸ್ ಮಾಡಲು ಹೊರಟಿದ್ದಾನೆ.

ಅದರೆ ಈ ವೇಳೆ ಅಚಾನಕ್ ಆಗಿ ಟ್ರಿಗರ್ ಒತ್ತಿದ್ದಾನೆ. ಇದರಿಂದ ಹೃದಯಕ್ಕೇ ಗುಂಡು ತಗುಲಿದ್ದು ಸ್ಥಳದಲ್ಲೇ ಕ್ಷಣಾರ್ಧದಲ್ಲಿ ಪ್ರಾಣ ಪಕ್ಷಿ ಹಾರಿಹೋಗಿದೆ. ಈ ಭಯಾನಕ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದೀಗ ಪೊಲೀಸರು ಗನ್ ವಶಕ್ಕೆ ಪಡೆದುಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.

pic.twitter.com/KbUPOYsHU7

 

— ︎ ︎venom (@venom1s) March 17, 2026

Share this Story:

Follow Webdunia kannada

ಮುಂದಿನ ಸುದ್ದಿ

ಏಕಾಂಗಿಯಾದ ಬಳಿಕ ಡೊನಾಲ್ಡ್ ಟ್ರಂಪ್ ಬಾಯಿಂದ ಬಂತು ಶಾಕಿಂಗ್ ಮಾತುಗಳು