Select Your Language

Notifications

webdunia
webdunia
webdunia
webdunia

ಏನು ಧಿಮಾಕು ಇರ್ಬೇಕು ಈತನಿಗೆ… ಮೆಟ್ರೋ ತನ್ನ ಸ್ವಂತ ಸ್ವತ್ತು ಎಂಬಂತೆ ನಡೆದುಕೊಂಡ ವ್ಯಕ್ತಿ: ಮುಂದೇನಾಯ್ತು Video

Metro controversy
ಮೆಟ್ರೋದಲ್ಲಿ ಪ್ರಯಾಣ ಮಾಡುತ್ತಿದ್ದ ವ್ಯಕ್ತಿ ತನ್ನ ಸ್ವಂತ ಸ್ವತ್ತು ಎಂಬಂತೆ ನಡೆದುಕೊಂಡು ಧಿಮಾಕು ತೋರಿಸಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಕೆಲವು ಜನರಿಗೆ ಸಾರ್ವಜನಿಕ ಸ್ಥಳದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬುದೇ ಗೊತ್ತಿರಲ್ಲ. ಎಷ್ಟೇ ವಿದ್ಯಾವಂತರಾಗಿರಲಿ, ತಾನು ಟ್ಯಾಕ್ಸ್ ಕಟ್ಟಲ್ವಾ, ಹೀಗಾಗಿ ಸಾರ್ವಜನಿಕ ವಸ್ತುಗಳಲ್ಲೇ ತನ್ನದೇ ಎಂಬಂತೆ ನಡೆದುಕೊಳ್ಳುತ್ತಾರೆ.

ಈ ವ್ಯಕ್ತಿಯೂ ಹೀಗೆಯೇ… ಮೆಟ್ರೋದಲ್ಲಿ ಪ್ರಯಾಣ ಮಾಡುತ್ತಿದ್ದ ವ್ಯಕ್ತಿ ತನ್ನ ಒಂದು ಕಾಲನ್ನು ಮೇಲೆತ್ತಿ ಸೀಟ್ ನ ಮೇಲಿಟ್ಟಿದ್ದ. ಇದನ್ನು ನಿಂತುಕೊಂಡಿದ್ದ ವ್ಯಕ್ತಿ ಪ್ರಶ್ನೆ ಮಾಡಿದ್ದು ತನಗೆ ಕೂತುಕೊ‍ಳ್ಳಲು ಸ್ಥಳಾವಕಾಶ ಕೊಡುವಂತೆ ಕೇಳುತ್ತಾನೆ. ಈ ವೇಳೆ ಈ ವ್ಯಕ್ತಿ ಮೊದಲು ಕಾಲು ಕೆಳಗಿಳಿಸದೇ ವಾಗ್ವಾದ ನಡೆಸುತ್ತಾನೆ. ನಿಂತಿದ್ ವ್ಯಕ್ತಿಯೂ ವಾಗ್ವಾದ ನಡೆಸಿದ ಮೇಲೂ ಈತನ ಧಿಮಾಕು ಕಡಿಮೆಯಾಗಲ್ಲ.

ಕಾಲು ಸೀಟ್ ನ ಮೇಲಿನಿಂದ ಕೊಂಚ ಕೆಳಗಿಳಿಸಿ ಒಂದು ಸೀಟ್ ಆವರಿಸುವಷ್ಟು ಕಾಲ ಮೇಲೆ ಕಾಲು ಹಾಕಿ ಕುಳಿತು ವಾಗ್ವಾದಕ್ಕಿಳಿಯುತ್ತಾನೆ. ಈತನ ಧಿಮಾಕಿನ ವರ್ತನೆಗೆ ನೆಟ್ಟಿಗರು ಛೀಮಾರಿ ಹಾಕಿದ್ದು ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

pic.twitter.com/jXS5y8x4L1

 

— Lakshay Mehta (@lakshaymehta08) August 16, 2026

Share this Story:

Follow Webdunia kannada

ಮುಂದಿನ ಸುದ್ದಿ

Karnataka Weather: ಈ ವಾರ ಭಾರೀ ಮಳೆ ಇಲ್ಲ, ಆದರೂ ಈ ಎಚ್ಚರಿಕೆ ಗಮನಿಸಿ