Publish Date: Tue, 01 Sep 2026 (09:31 IST)
Updated Date: Tue, 01 Sep 2026 (09:34 IST)
ಇನ್ನೊಬ್ಬರ ಜೊತೆ ಸಲ್ಲಾಪದಲ್ಲಿದ್ದ ಪತಿಯನ್ನು ಹೆಂಡತಿಯೊಬ್ಬಳು ರೆಡ್-ಹ್ಯಾಂಡಾಗಿ ಹಿಡಿದು, ರಸ್ತೆ ಮಧ್ಯದಲ್ಲೇ ತರಾಟೆಗೆ ತೆಗೆದುಕೊಂಡು ಧರ್ಮದೇಟು ನೀಡಿರುವ ಘಟನೆ ಸಂಭವಿಸಿದೆ. ಸಿಕ್ಕಿಬಿದ್ದದ್ದು ಬೇರೆ ಯಾರೂ ಅಲ್ಲ, ಸ್ವತಃ ಪೊಲೀಸ್ ಇಲಾಖೆಯ ಮಹಿಳಾ ಕಾನ್‌ಸ್ಟೇಬಲ್ ಜೊತೆ ಎಂಬುದು ಈ ಘಟನೆಯ ವಿಶೇಷ.
ವರದಿಗಳ ಪ್ರಕಾರ, ಉತ್ತರ ಪ್ರದೇಶದ ಪ್ರತಾಪ್‌ಗಢಕ್ಕೆ ಈ ಮಹಿಳಾ ಕಾನ್‌ಸ್ಟೇಬಲ್ ನಿಯೋಜನೆಗೊಂಡಾಗಿನಿಂದ ಪತಿ ಹಾಗೂ ಆಕೆಯ ನಡುವೆ ಅಕ್ರಮ ಸಂಬಂಧ ಬೆಳೆದಿತ್ತು. ಈ ವಿಚಾರ ತಿಳಿದು ಕೋಪದಿಂದ ಕುದಿಯುತ್ತಿದ್ದ ಪತ್ನಿ, ಇಬ್ಬರೂ ಒಟ್ಟಿಗಿದ್ದಾಗ ಸ್ಥಳಕ್ಕೆ ದಾಳಿ ನಡೆಸಿ ರಂಗೇರಿದ ಸರಸವನ್ನು ಸಾಕ್ಷಿ ಸಮೇತ ಹಿಡಿದಿದ್ದಾರೆ.
ಆಕ್ರೋಶಗೊಂಡ ಪತ್ನಿ, ಯಾವುದೇ ಮುಲಾಜಿಲ್ಲದೆ ಸಾರ್ವಜನಿಕವಾಗಿಯೇ ಪತಿಗೆ ಸರಿಯಾಗಿ ತರಾಟೆಗೆ ತೆಗೆದುಕೊಂಡು ಥಳಿಸಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ನಡೆದ ಈ ಗಲಾಟೆಯನ್ನು ಕಂಡು ಸುತ್ತಮುತ್ತಲಿನ ಜನರು ಜಮಾಯಿಸಿದ್ದರು.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯ ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿ, ಇಬ್ಬರನ್ನೂ ಬಿಡಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಬಳಿಕ ವಿಚಾರಣೆಗಾಗಿ ಪತಿ, ಪತ್ನಿ ಹಾಗೂ ಮಹಿಳಾ ಕಾನ್‌ಸ್ಟೇಬಲ್ ಇಬ್ಬರನ್ನೂ ಪೊಲೀಸ್ ಠಾಣೆಗೆ ಕರೆದೊಯ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ