Publish Date: Tue, 01 Sep 2026 (08:51 IST)
Updated Date: Tue, 01 Sep 2026 (08:55 IST)
ಜಾರ್ಖಂಡ್‌ನ ಜಂಶೇದ್‌ಪುರದ ಗೋಲ್ಮುರಿ (ಹಾಕಿ ಬ್ರಿಡ್ಜ್ / ಸಾಕ್ಚಿ-ಕಾಳಿಮಾಟಿ ರಸ್ತೆ) ಪ್ರದೇಶದಲ್ಲಿ ಎದೆನಡುಗಿಸುವ ದುರಂತವೊಂದು ಸಂಭವಿಸಿದೆ. ಭಾರತ್ ಪೆಟ್ರೋಲಿಯಂ ಸಿಎನ್‌ಜಿ ಪಂಪ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ 24 ವರ್ಷದ ಯುವಕ ತುಷಾರ್ ಖಾಮ್ರಿ, ಕಾರಿಗೆ ಅನಿಲ ತುಂಬಿಸುತ್ತಿದ್ದಾಗ ಸಿಎನ್‌ಜಿ ಪೈಪ್ ಮತ್ತು ನೋಝಲ್ ತೀವ್ರ ಒತ್ತಡದಿಂದ ದಿಢೀರನೆ ಸ್ಫೋಟಗೊಂಡಿದೆ.
ಸ್ಫೋಟದ ಭಾರಿ ರಭಸಕ್ಕೆ ಎಸೆಯಲ್ಪಟ್ಟ ಕಬ್ಬಿಣದ ನೋಝಲ್ ನೇರವಾಗಿ ತುಷಾರ್ ಅವರ ತಲೆಗೆ ಬಲವಾಗಿ ಅಪ್ಪಳಿಸಿದೆ. ತೀವ್ರವಾಗಿ ಗಾಯಗೊಂಡು ರಕ್ತಸ್ರಾವದಿಂದ ಕುಸಿದುಬಿದ್ದ ಅವರನ್ನು ತಕ್ಷಣವೇ ಟಾಟಾ ಮೇನ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದರು. ಕೇವಲ ಎರಡು ತಿಂಗಳಲ್ಲಿ ಮದುವೆಯಾಗಬೇಕಿದ್ದ ಈ ಯುವಕ, ತನ್ನ ಕುಟುಂಬದ ಏಕೈಕ ಆಸರೆಯಾಗಿದ್ದನು.
ದುರಂತದ ಸಿಸಿಟಿವಿ ದೃಶ್ಯಗಳು: ಕಣ್ಣು ತೆರೆಸುವ ಘಟನೆ
ಈ ದುರಂತದ ಸಿಸಿಟಿವಿ ದೃಶ್ಯಾವಳಿಗಳು ಪ್ರತಿಯೊಬ್ಬರ ನರನರಗಳನ್ನೂ ನಡುಗಿಸುವಂತಿವೆ. ಸಣ್ಣ ಭದ್ರತಾ ಲೋಪ ಅಥವಾ ಉಪಕರಣದ ವೈಫಲ್ಯವು ಎಷ್ಟು ಕ್ಷಣಾರ್ಧದಲ್ಲಿ ಜೀವವನ್ನು ಬಲಿಪಡೆಯಬಲ್ಲದು ಎಂಬುದಕ್ಕೆ ಈ ದೃಶ್ಯವೇ ಸಾಕ್ಷಿ. ಇದು ಸಿಎನ್‌ಜಿ ಪಂಪ್ ಮಾಲೀಕರು, ಆಡಳಿತ ಮಂಡಳಿ ಮತ್ತು ಸಾರ್ವಜನಿಕರಿಗೆ ಒಂದು ದೊಡ್ಡ ಎಚ್ಚರಿಕೆಯ ಗಂಟೆಯಾಗಿದೆ.
ಯಾವುದೇ ಒಂದು ಯಾಂತ್ರಿಕ ಅಥವಾ ತಾಂತ್ರಿಕ ವೈಫಲ್ಯವು ಅಮಾಯಕ ಜೀವವನ್ನು ಬಲಿಪಡೆಯಬಾರದು. ಸಿಎನ್‌ಜಿ ಪಂಪ್‌ಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರ ಹಾಗೂ ಸಾರ್ವಜನಿಕರ ಜೀವ ರಕ್ಷಣೆಗೆ ಅತ್ಯಂತ ಕಟ್ಟುನಿಟ್ಟಿನ ಭದ್ರತಾ ನಿಯಮಗಳನ್ನು ಜಾರಿಗೆ ತರಲು ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಕ್ರಮಕೈಗೊಳ್ಳಬೇಕಾಗಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ