Publish Date: Tue, 04 Aug 2026 (12:28 IST)
Updated Date: Tue, 04 Aug 2026 (12:32 IST)
ಚೆನ್ನೈ: ನಟಿ ತ್ರಿಶಾ ಕೃಷ್ಣನ್ ಬಗ್ಗೆ ಕೀಳಾಗಿ ಕಾಮೆಂಟ್ ಮಾಡಿದ್ದ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಅವರನ್ನು ಇಂದು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಸಿಎಂ ವಿಜಯ್ ಆಪ್ತ ಗೆಳೆಯ ಸಂಜೀವ್ ದೂರದಲ್ಲಿ ನಿಂತು ವಿಡಿಯೋ ಮಾಡುತ್ತಿದ್ದಿದ್ದು ಎಲ್ಲರ ಗಮನ ಸೆಳೆದಿದೆ.
ಸಮಾವೇಶವೊಂದರಲ್ಲಿ ಉದಯನಿಧಿ ಮಾತನಾಡುವಾಗ ತ್ರಿಶಾ ಬಗ್ಗೆ ಕೀಳು ಅಭಿರುಚಿಯ ಕಾಮೆಂಟ್ ಮಾಡಿದ್ದರು. ಈ ಬಗ್ಗೆ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಎಲ್ಲರಿಗೂ ಗೊತ್ತಿರುವ ಹಾಗೆ ತ್ರಿಶಾ ಸಿಎಂ ಜೊಸೆಫ್ ವಿಜಯ್ ಅವರ ಆಪ್ತರು. ಜೊತೆಗೆ ಖ್ಯಾತ ನಟಿ.
ಆಕೆ ಬಗ್ಗೆ ಕೀಳು ಮಟ್ಟದ ಕಾಮೆಂಟ್ ಮಾಡಿರುವುದು ಈಗ ಉದಯನಿಧಿಗೆ ಸಂಕಷ್ಟ ತಂದೊಡ್ಡಿದೆ. ಇಂದು ಪೊಲೀಸರು ಉದಯನಿಧಿ ಮನೆಗೆ ಬಂದು ಅವರನ್ನು ವಶಕ್ಕೆ ಪಡೆದಿದ್ದಾರೆ.
ಉದಯನಿಧಿ ಅವರ ನೆರೆಮನೆಯಲ್ಲಿ ವಾಸವಿರುವ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರ ಆಪ್ತ ಸ್ನೇಹಿತ ಹಾಗೂ ನಟ ಸಂಜೀವ್ ಅವರು ತಮ್ಮ ಮನೆಯ ಒಳಗಿನಿಂದ ಮೊಬೈಲ್‌ನಲ್ಲಿ ಈ ಪೊಲೀಸ್ ಕಾರ್ಯಾಚರಣೆ ಹಾಗೂ ಪ್ರತಿಭಟನೆಯ ವಿಡಿಯೋ ಚಿತ್ರೀಕರಿಸುತ್ತಿದ್ದರು. ಇದನ್ನು ಗಮನಿಸಿದ ಡಿಎಂಕೆ ಕಾರ್ಯಕರ್ತರು "ಏಕೆ ವಿಡಿಯೋ ಮಾಡುತ್ತಿದ್ದೀರಾ? ಹೊರಗೆ ಬಂದು ಮಾತನಾಡಿ!" ಎಂದು ಆಕ್ರೋಶದಿಂದ ಕೂಗಾಡಿದ್ದಾರೆ.
ತಂಜಾವೂರು ಪ್ರತಿಭಟನಾ ಸಭೆಯಲ್ಲಿ ಉದಯನಿಧಿ ಸ್ಟಾಲಿನ್ ಅವರು ನೀಡಿದ್ದರೆನ್ನಲಾದ ಹೇಳಿಕೆಗಳ ಕುರಿತು ದೂರು ದಾಖಲಾಗಿದ್ದು, ಪೊಲೀಸರು ನೀಲಂಕರೈ ನಿವಾಸದಿಂದ ಅವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಉದಯನಿಧಿ ಅವರು ಇದನ್ನು "ರಾಜಕೀಯ ದುರುದ್ದೇಶಪೂರಿತ ನಡವಳಿಕೆ" ಎಂದು ಬಣ್ಣಿಸಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ