Select Your Language

Notifications

webdunia
webdunia
webdunia
webdunia

ಮಹಿಳೆಯರ ಬಗ್ಗೆ ಕಾಮೆಂಟ್ ಮಾಡುತ್ತಿದ್ದ ಪ್ರಯಾಣಿಕನಿಗೆ ಏರ್ ಹೋಸ್ಟೆಸ್ ನೀಡಿದ ಉತ್ತರ ಈಗ ವೈರಲ್ Video

Viral video of air hostess
Photo Credit: X
ಚಲಿಸುತ್ತಿದ್ದ ವಿಮಾನವೊಂದರಲ್ಲಿ ಮಹಿಳೆಯರ ಕುರಿತು ಸರಣಿ ಅವಹೇಳನಕಾರಿ ಮತ್ತು ಸ್ತ್ರೀದ್ವೇಷದ ಕಾಮೆಂಟ್‌ಗಳನ್ನು ಮಾಡುತ್ತಿದ್ದ ಪ್ರಯಾಣಿಕನೊಬ್ಬನಿಗೆ ಏರ್ ಹೋಸ್ಟೆಸ್ ಒಬ್ಬರು ಧೈರ್ಯದಿಂದ ಮುಖಾಮುಖಿಯಾಗಿ, ಖಡಕ್ ಪ್ರತಿಕ್ರಿಯೆ ನೀಡಿರುವ ಘಟನೆ ನಡೆದಿದೆ. ಅನ್ಯಾಯದ ವಿರುದ್ಧ ಮೌನವಾಗಿರದೆ, ತಕ್ಷಣವೇ ಆತನಿಗೆ ತಕ್ಕ ಉತ್ತರ ನೀಡಿದ ವಿಮಾನ ಸಿಬ್ಬಂದಿಯ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ವಿಮಾನ ಪ್ರಯಾಣದ ಅವಧಿಯಲ್ಲಿ ಸಹ-ಪ್ರಯಾಣಿಕರೊಬ್ಬರು ಮಹಿಳೆಯರನ್ನು ಕೀಳಾಗಿ ಕಾಣುವ ಮತ್ತು ಅವಹೇಳನ ಮಾಡುವಂತಹ ಮಾತುಗಳನ್ನು ಪದೇ ಪದೇ ಆಡುತ್ತಿದ್ದರು ಎನ್ನಲಾಗಿದೆ. ಇದನ್ನು ಗಮನಿಸಿದ ಕರ್ತವ್ಯದಲ್ಲಿದ್ದ ಏರ್ ಹೋಸ್ಟೆಸ್, ಸುಮ್ಮನೆ ಕೂರದೆ ನೇರವಾಗಿ ಆತನ ಸೀಟಿನ ಬಳಿ ಹೋಗಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಹಿಳೆಯರ ಗೌರವಕ್ಕೆ ಧಕ್ಕೆ ತರುವಂತಹ ಇಂತಹ ವರ್ತನೆಗಳನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಆಕೆಗೆ ಆತನಿಗೆ ಎಚ್ಚರಿಕೆ ನೀಡಿದ್ದಾರೆ.

ವಿಮಾನದಲ್ಲಿದ್ದ ಸಹ-ಪ್ರಯಾಣಿಕರೊಬ್ಬರು ಈ ಇಡೀ ಘಟನೆಯನ್ನು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದು ಇಂಟರ್ನೆಟ್‌ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ಹರಿದಾಡುತ್ತಿದ್ದಂತೆ ನೆಟ್ಟಿಗರು ಏರ್ ಹೋಸ್ಟೆಸ್ ನಡೆಗೆ ಮನಸಾರೆ ಶ್ಲಾಘಿಸುತ್ತಿದ್ದಾರೆ. ವಿಮಾನಯಾನ ಸಂಸ್ಥೆಗಳು ತಮ್ಮ ಸಿಬ್ಬಂದಿಯ ಇಂತಹ ದಿಟ್ಟ ನಿರ್ಧಾರಗಳನ್ನು ಬೆಂಬಲಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.


pic.twitter.com/v9JbDYYQbT

 

— rpramodhkumar (@rpramodhkumar) June 27, 2026

Share this Story:

Follow Webdunia kannada

ಮುಂದಿನ ಸುದ್ದಿ

ಹಸುವಿನ ಮೇಲೆ ಇಂಥಾ ಕ್ರೌರ್ಯವೆಸಗೋದಾ... ಆರೋಪಿಗೆ ತಕ್ಕ ಶಾಸ್ತಿ ಮಾಡಿದ ಉತ್ತರ ಪ್ರದೇಶ ಪೊಲೀಸರು Video