ನವದೆಹಲಿ: ಹೃದಯ ಸಂಬಂಧ ಕಾಯಿಲೆ ಸಂಬಂಧ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಉಪರಾಷ್ಟ್ರಪತಿ ಜಗದೀಪ್ ಧಂಕರ್ ಅವರನ್ನು ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.
ಮಾರ್ಚ್ 9ರಂದು ಹೃದಯ ಸಂಬಂಧ ಖಾಯಿಲೆ ಹಿನ್ನೆಲೆ ಅವರನ್ನು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ಗೆ ದಾಖಲಿಸಲಾಗಿತ್ತು. ಏಮ್ಸ್‌ನಲ್ಲಿ ವೈದ್ಯಕೀಯ ತಂಡದಿಂದ ಅಗತ್ಯ ಆರೈಕೆ ಪಡೆದು ಚೇತರಿಸಿಕೊಂಡ ನಂತರ ಮಾರ್ಚ್ 12ರಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.
X ನಲ್ಲಿನ ಪೋಸ್ಟ್‌ನಲ್ಲಿ, ಉಪರಾಷ್ಟ್ರಪತಿ ಧಂಕರ್ ಅವರು AIIMS ನ ವೈದ್ಯಕೀಯ ತಂಡಕ್ಕೆ ಧನ್ಯವಾದ ಅರ್ಪಿಸಿದರು.
"ಮಾರ್ಚ್ 9 ರಂದು ನನ್ನ ದಾಖಲಾತಿಯಿಂದ ಮಾರ್ಚ್ 12 ರಂದು ಬಿಡುಗಡೆಯಾಗುವವರೆಗೆ ನವದೆಹಲಿಯ ಏಮ್ಸ್‌ನಲ್ಲಿ ವೈದ್ಯಕೀಯ ತಂಡದ ಅನುಕರಣೀಯ ಆರೈಕೆ ಮತ್ತು ವೃತ್ತಿಪರತೆಯನ್ನು ಆಳವಾಗಿ ಶ್ಲಾಘಿಸುತ್ತೇನೆ. ಅವರ ಸಮರ್ಪಣೆ ಮತ್ತು ನಿಖರವಾದ ಗಮನವು ಸುಗಮ ಚೇತರಿಕೆಯನ್ನು ಖಚಿತಪಡಿಸಿತು" ಎಂದು ಅವರು ಹೇಳಿದರು.