Publish Date: Tue, 21 Jul 2020 (14:37 IST)
Updated Date: Tue, 21 Jul 2020 (14:40 IST)
ಬೆಂಗಳೂರು: ಒಂದು ಕಾಲದಲ್ಲಿ ಕರ್ನಾಟಕ ಮತ್ತು ತಮಿಳುನಾಡಿಗೆ ನಡುಕ ಹುಟ್ಟಿಸಿದ್ದ ಕಾಡುಗಳ್ಳ ವೀರಪ್ಪನ್ ಪುತ್ರಿ ವಿದ್ಯಾ ರಾಣಿ ಈಗ ರಾಜಕೀಯ ಪಕ್ಷಕ್ಕೆ ಸೇರಿ ಜನಸೇವೆ ಮಾಡಲು ಹೊರಟಿದ್ದಾರೆ.
ತಮಿಳುನಾಡು ಬಿಜೆಪಿಯ ಯೂತ್ ಘಟಕದ ಉಪಾಧ್ಯಕ್ಷೆಯಾಗಿ ವಿದ್ಯಾ ಆಯ್ಕೆಯಾಗಿದ್ದಾರೆ. ತನಗೆ ಜನಸೇವೆ ಮಾಡಬೇಕೆಂಬ ಆಸೆಯಿದೆ ಎಂದು ವಿದ್ಯಾ ಹೇಳಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಕಾನೂನು ಪದವಿ ಪಡೆದಿರುವ ವಿದ್ಯಾ ಅಪ್ಪನ ತದ್ವಿರುದ್ಧ ಗಯಣದವಳು. ಈಕೆ ಅಪ್ಪನನ್ನು ಭೇಟಿಯಾಗಿದ್ದೂ ಅಪರೂಪವಂತೆ. ಆದರೆ ಈಗ ತನ್ನದೇ ಕಾಲಿನಲ್ಲಿ ನಿಂತು ಸಾಧನೆ ಮಾಡಲು ಹೊರಟಿದ್ದಾರೆ.