ಡೆಹ್ರಾಡೂನ್ : ರಾಜ್ಯಾದ್ಯಂತ ಶಾಲೆಗಳಲ್ಲಿ ವೇದ, ರಾಮಾಯಣ ಮತ್ತು ಗೀತೆಗಳನ್ನು ಕಲಿಸಬೇಕು ಎಂದು ಉತ್ತರಾಖಂಡ ಶಿಕ್ಷಣ ಸಚಿವ ಧನ್ ಸಿಂಗ್ ರಾವತ್ ಹೇಳಿದ್ದಾರೆ.
ಹೊಸ ಶಿಕ್ಷಣ ನೀತಿಯ ಪ್ರಕಾರ, ಭಾರತೀಯ ಇತಿಹಾಸ ಮತ್ತು ಸಂಪ್ರದಾಯಗಳನ್ನು ಆಧರಿಸಿ ವಿದ್ಯಾರ್ಥಿಗಳ ಪಠ್ಯಕ್ರಮವನ್ನು ಸಿದ್ಧಪಡಿಸಬೇಕು. ವೇದಪುರಾಣ, ಗೀತೆಯೊಂದಿಗೆ ಸ್ಥಳೀಯ ಜಾನಪದ ಭಾಷೆಗಳನ್ನು ಪ್ರೋತ್ಸಾಹಿಸಬೇಕು.
ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತಂದ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಉತ್ತರಾಖಂಡ ಪಾತ್ರವಾಗಲಿದೆ ಎಂದು ತಿಳಿಸಿದ್ದಾರೆ.
ಶೀಘ್ರದಲ್ಲೇ ಹೊಸ ಪಠ್ಯಕ್ರಮವನ್ನು ಸಿದ್ಧಪಡಿಸಲಾಗುವುದು ಮತ್ತು ಹೊಸ ಶಿಕ್ಷಣ ನೀತಿಯ ನಿಯಮಗಳಿಗೆ ಸಂಪುಟ ಸಭೆಯಲ್ಲಿ ಅಂಕಿತ ಹಾಕಲಾಗುವುದು. ಅಲ್ಲದೇ ಉತ್ತರಾಖಂಡ ಚಳವಳಿಯ ಇತಿಹಾಸ ಮತ್ತು ಮಹಾನ್ ವ್ಯಕ್ತಿಗಳ ಬಗ್ಗೆಯೂ ಹೊಸ ಪಠ್ಯಕ್ರಮದಲ್ಲಿ ಬೋಧಿಸಲಾಗುವುದು ಎಂದಿದ್ದಾರೆ.