Select Your Language

Notifications

webdunia
webdunia
webdunia
webdunia

ವಾರ್ಧಾ ಆರ್ಭಟಕ್ಕೆ ಎರಡು ಬಲಿ

ವಾರ್ಧಾ ಆರ್ಭಟಕ್ಕೆ ಎರಡು ಬಲಿ
ಚೆನ್ನೈ , ಸೋಮವಾರ, 12 ಡಿಸೆಂಬರ್ 2016 (15:31 IST)
ಚೆನ್ನೈ ಮಹಾನಗರವನ್ನು ಅಪ್ಪಳಿಸಿರುವ ವಾರ್ಧಾ ಚಂಡಮಾರುತಕ್ಕೆ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ತಮಿಳುನಾಡು ಸರ್ಕಾರ ಅಧಿಕೃತ ಪ್ರಕಟನೆಯನ್ನು ಹೊರಹಾಕಿದೆ. 
ವಲ್ಲಭ ಭಾಯಿ ರಸ್ತೆಯಲ್ಲಿರುವ ರಾಜಭವನ ಸೇರಿದಂತೆ ಅನೇಕ ಕಡೆಗಳಲ್ಲಿ ಮಳೆ ನೀರು ನುಗ್ಗಿದ್ದು 1,000ಕ್ಕೂ ಹೆಚ್ಚಿನ ಮರಗಳು ಧರೆಗುರುಳಿವೆ.  ಅನೇಕ ಮನೆಗಳ ಮೇಲ್ಛಾವಣಿ ಹಾರಿ ಹೋಗಿವೆ.
 
ಬಹುತೇಕ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್,  ಒನ್ ವೇ ಸಂಚಾರ ಪರಿಸ್ಥಿತಿ ನಿರ್ಮಾಣವಾಗಿದೆ. 
 
ನಗರದಾದ್ಯಂತ ಸಾವಿರಕ್ಕೂ ಹೆಚ್ಚಿನ ಮರಗಳು ನೆಲಕ್ಕುರುಳಿವೆ. ಬೆಳಿಗ್ಗಿನಿಂದಲೇ ನಗರದಾದ್ಯಂತ ವಿದ್ಯುತ್‌ನ್ನು ಸ್ಥಗಿತಗೊಳಿಸಲಾಗಿದೆ. ಸಂಜೆ 6 ಗಂಟೆಯವರೆಗೆ ಮನೆಯಿಂದ ಹೊರಬರದಂತೆ ನಗರವಾಸಿಗಳಿಗೆ ಸೂಚನೆ ನೀಡಲಾಗಿದೆ. ಆದರೆ ಮುಂಜಾನೆ 9.30ರ ಒಳಗೆ ಕಚೇರಿಗಳಿಗೆ ಹೋದವರು ಮರಳಿ ಮನೆ ಸೇರುವುದು ಹೇಗೆಂಬ ಆತಂಕಕ್ಕೀಡಾಗಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವಾರ್ಧಾ ಚಂಡಮಾರುತ: ಚೆನ್ನೈನಲ್ಲಿ ನೆಲಕ್ಕುರುಳಿದ 137ಕ್ಕೂ ಹೆಚ್ಚು ಮರಗಳು