ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗುತ್ತಿದ್ದು 137ಕ್ಕೂ ಹೆಚ್ಚು ಮರಗಳು ಧರೆಗುರುಳಿ ರಸ್ತೆ ಸಂಚಾರ ಅಸ್ತವ್ಯಸ್ತವಾಗಿದೆ.
ದಿವಂಗತ ಜಯಲಿತಾ ಅವರ ನಿವಾಸವಿರುವ ಫೋಯಸ್ ಗಾರ್ಡನ್‌ನಲ್ಲಿ ಒಟ್ಟು 7 ಮರಗಳು ನೆಲಕ್ಕುರುಳಿವೆ. ರಾಯಪೇಟದಲ್ಲಿ 59- ನುಂಗಮಬಾಕಮ್‌ನಲ್ಲಿ-20, ಮಂಡವೇಲಿಯಲ್ಲಿ-23, ಗೋಪಾಲಪುರಂನಲ್ಲಿ 16 ಮರಗಳು ವಾರ್ಧಾ ಚಂಡಮಾರುತದಿಂದಾಗಿ ಧರೆಗುರುಳಿವೆ.
ಹವಾಮಾನ ಇಲಾಖೆ ಪೂರ್ವ ಸೂಚನೆಯನ್ನು ಕೊಟ್ಟಿರುವುದರಿಂದ ಎದುರಾಗುವ ವಿಪತ್ತುಗಳನ್ನು ಎದುರಿಸಲು ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.
ತಮಿಳುನಾಡಿನ ಇತರ ಭಾಗಗಳು ಮತ್ತು ಆಂಧ್ರ ಕರಾವಳಿಯಲ್ಲಿ ವಾರ್ಧಾ ಎಫೆಕ್ಟ್ ಆಗಲಿದೆ. ಆದರೆ ಚೆನ್ನೈ ಮಹಾನಗರವಾಗಿದ್ದು ಇಲ್ಲಿನ ಜನಜೀವನದ ಮೇಲೆ ಹೆಚ್ಚಿನ ಸಮಸ್ಯೆಗಳುಂಟಾಗಬಹುದು.
ಚೆನ್ನೈ ಸಂಪೂರ್ಣ ಬಂದ್ ಆಗಿದ್ದು ಜನರು ಮನೆಗಳಿಂದ ಹೊರಬರುತ್ತಿಲ್ಲ. ಆದರೆ ಗಾಳಿಯ ಅಬ್ಬರಕ್ಕೆ ಮನೆಯ ಛಾವಣಿಗಳು ಹೊರಬರುವ ಭೀತಿಯನ್ನು ಜನರು ಎದುರಿಸುತ್ತಿದ್ದಾರೆ.
27 ವಿಮಾನಮಾರ್ಗಗಳನ್ನು ಬದಲಾಯಿಸಲಾಗಿದ್ದು, ಬಹುತೇಕ ಕಡೆ ರೈಲು ಮತ್ತು ಬಸ್ ಸಂಚಾರ ಸ್ಥಗಿತಗೊಂಡಿದೆ. ಚೆನ್ನೈಗೆ ಬಂದಿಳಿದಿರುವ ಮತ್ತು ಚೆನ್ನೈ ಮೂಲಕ ಬೇರೆ ಕಡೆ ಹೊರಟಿದ್ದ ರೈಲು ಪ್ರಯಾಣಿಕರು ಹೊರ ಹೋಗಲಾರದೆ ಸಿಕ್ಕಿ ಹಾಕಿಕೊಂಡಿದ್ದಾರೆ.
ಕಳೆದ ವರ್ಷ ಇದೇ ಸಮಯದಲ್ಲಿ ಭಾರಿ ಮಳೆಯಾಗಿ ಚೆನ್ನೈ ಅಕ್ಷರಶಃ ದ್ವೀಪದಂತಾಗಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ