Select Your Language

Notifications

webdunia
webdunia
webdunia
webdunia

ಸ್ವೈಪ್ ಮಾಡುವವರಿಗೆ ಒಂದು ಕೋಟಿ ಬಹುಮಾನ!

ನೀತಿ ಆಯೋಗ
New Delhi , ಸೋಮವಾರ, 12 ಡಿಸೆಂಬರ್ 2016 (13:00 IST)
ಡಿಜಿಟಲ್ ವ್ಯವಹಾರ ನಡೆಸುವವರಿಗೆ ಇನ್ನು ಮುಂದೆ ಭರ್ಜರಿ ಬಹುಮಾನ ಸಿಗಲಿದೆ. ಬಂಪರ್ ಬಹುಮಾನ ಒಂದು ಕೋಟಿ ಅಥವಾ ರು.10 ಲಕ್ಷ ಸಿಗುವ ಸಾಧ್ಯತೆ ಇದೆ. ಬಡವರು, ಮಧ್ಯಮ ವರ್ಗದವರಲ್ಲಿ ಡಿಜಿಟಲ್ ವ್ಯವಹಾರ ಪ್ರೋತ್ಸಾಹಿಸಲು ನೀತಿ ಆಯೋಗ ಈ ಯೋಜನೆ ರೂಪಿಸಿದೆ.
 
ಡಿಜಿಟಲ್ ಪೇಮೆಂಟ್ ಸಿಸ್ಟಂ ಬಳಸುವವರಿಗೆ ಈ ಬಹುಮಾನ ಸಿಗಲಿದೆ. ಇದಕ್ಕೆ ಸಂಬಂಧಿಸಿದ ನೀತಿ ನಿಯಮಗಳನ್ನು ರೂಪಿಸಲು ರಾಷ್ಟ್ರೀಯ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾವನ್ನು (ಎನ್‍ಪಿಸಿಐ) ಕೋರಿದೆ.
 
ಇದಕ್ಕಾಗಿ ರಾಷ್ಟ್ರೀಯ ಆರ್ಥಿಕ ನಿಧಿಯಿಂದ ರೂ.125 ಕೋಟಿ ಮೀಸಲಿಡಬೇಕೆಂದು ನಿರ್ಣಯಿಸಲಾಗಿದೆ. ಎಸ್‍ಬಿಐ, ಪಂಜಾಬ್ ನ್ಯಾಶನಲ್ ಬ್ಯಾಂಕ್, ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಇಂಡಿಯಾ, ಐಸಿಐಸಿಐ ಬ್ಯಾಂಕ್, ಹೆಚ್‌ಡಿಎಫ್‍ಸಿ ಬ್ಯಾಂಕ್, ಸಿಟಿ ಬ್ಯಾಂಕ್, ಎಚ್‍ಎಚ್‍ಬಿಸಿ ಬ್ಯಾಂಕುಗಳು ಪ್ರೊಮೋಟರ್‌ಗಳಾಗಿ ಕೆಲಸ ಮಾಡುತ್ತಿವೆ.
 
ಮುಖ್ಯವಾಗಿ ಹಳ್ಳಿಗಳು, ಸಣ್ಣ ಪಟ್ಟಣಗಳಲ್ಲಿ ವಾಸಿಸುವವರನ್ನು ಡಿಜಿಟಲ್ ವ್ಯವಹಾರದ ಕಡೆಗೆ ಸೆಳೆಯಲು ಪ್ರಧಾನ ಗುರಿಯಾಗಿಸಿಕೊಂಡು ಈ ಯೋಜನೆ ರೂಪಿಸಲಾಗಲಿದೆ. ಡಿಜಿಟಲ್ ವ್ಯವಹಾರದ ಐಡಿಗಳನ್ನು ಮೂರು ತಿಂಗಳಿಗೊಮ್ಮೆ ಲಕ್ಕಿ ಡ್ರಾ ಮಾಡಲಾಗುತ್ತದೆ. 
 
ಒಬ್ಬರಿಗೆ ಬಂಪರ್ ಬಹುಮಾನವಾಗಿ ರು.1 ಕೋಟಿ ಕೊಡಲು ನಿರ್ಧರಿಸಲಾಗಿದೆ. ಅದೇ ರೀತಿ ವಾರಕ್ಕೆ ಒಮ್ಮೆ ಲಕ್ಕಿ ಡ್ರಾ ಮೂಲಕ 10 ಮಂದಿ ಗ್ರಾಹಕರು, 10 ಮಂದಿ ವ್ಯಾಪಾರಿಗಳನ್ನು ಆಯ್ಕೆ ಮಾಡಿ ತಲಾ ರು. 10 ಲಕ್ಷ ಬಹುಮಾನ ಕೊಡಲಾಗುತ್ತದೆ. 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಭೀಮಾನಾಯ್ಕ ಇಂದು ಕೋರ್ಟ್‌ಗೆ ಹಾಜರ್