ಭಾನುವಾರ ಬಂಧನಕ್ಕೊಳಗಾಗಿದ್ದ ಕೆಎಸ್ಎಸ್ ಅಧಿಕಾರಿ ಭೀಮಾನಾಯಕ್ ಮತ್ತು ಅವರ ಖಾಸಗಿ ಕಾರ್ ಚಾಲಕ ಮೊಹಮ್ಮದ್ ಅವರನ್ನು ಇಂದು ಕೋರ್ಟ್‌ಗೆ ಹಾಜರು ಪಡಿಸಲಾಗುವುದು.
ತಮ್ಮ ಕಾರ್ ಚಾಲಕ ರಮೇಶ್ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪ ಕೇಳಿ ಬಂದ ಬಳಿಕ ತಲೆಮರೆಸಿಕೊಂಡಿದ್ದ ಭೀಮಾನಾಯಕ್ ಅವರನ್ನು ನಿನ್ನೆ ಕಲಬುರ್ಗಿಯಲ್ಲಿ ಬಂಧಿಸಲಾಗಿತ್ತು. ಇಂದು ಅವರನ್ನು ಮಂಡ್ಯದ ಮದ್ದೂರಿನ ಜೆಎಂಎಫ್‌ಸಿ ಕೋರ್ಟ್‌ಗೆ ಹಾಜರು ಪಡಿಸಲಾಗುತ್ತದೆ ಎಂದು ತಿಳಿದು ಬಂದಿದೆ.
ವಿಶೇಷ ಭೂ ಸ್ವಾಧೀನ ಅಧಿಕಾರಿಯಾಗಿದ್ದ ಭೀಮಾನಾಯ್ಕ್ ಗಣಿ ಧಣಿ ಜನಾರ್ಧನ ರೆಡ್ಡಿ ಮಗಳ ಮದುವೆಗೆ ಕಪ್ಪು ಹಣ ವೈಟ್ ಮಾಡುವ ದಂಧೆಗೆ ರೆಡ್ಡಿಗೆ ಸಹಾಯ ಮಾಡಿದ್ದರು. ಈ ವಿಷಯ ನನಗೆ ತಿಳಿದಿದ್ದರಿಂದ ಪ್ರಾಣ ಬೆದರಿಕೆ ಒಡ್ಡಿದ್ದರು ಮತ್ತು 3 ತಿಂಗಳ ಸಂಬಳವನ್ನು ತಡೆ ಹಿಡಿದಿದ್ದರು ಎಂದು ಭೀಮಾ ನಾಯ್ಕ ಕಾರ್ ಚಾಲಕ ರಮೇಶ್ ಡೆತ್ ನೋಟ್ ನಲ್ಲಿ ಬರೆದಿದ್ದರು.
ಡೆತ್ ನೋಟ್‌ನಲ್ಲಿರುವ ಕೆಲ ಅಂಶಗಳು ಮತ್ತು ರಮೇಶ್ ಸಹೋದರ ದೂರಿನ ಆಧಾರದ ಮೇಲೆ ಪೊಲೀಸರು ಭೀಮಾನಾಯ್ಕ ಮತ್ತು ಮೊಹಮ್ಮದ್‌ನನ್ನು ಬಂಧಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.