ಬೆಂಗಳೂರು: ಕೊರೊನಾ ಲಸಿಕೆ ನಿರೀಕ್ಷೆಯಲ್ಲಿದ್ದ 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಸಿಹಿಸುದ್ದಿಯೊಂದು ಸಿಕ್ಕಿದ್ದು, 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಮೊದಲ ಕೋವಿಡ್ ಲಸಿಕೆ ಝೈಕೋವ್ ಡಿಗೆ ಗ್ರೀನ್ ಸಿಗ್ನಲ್ ನೀಡಲಾಗಿದೆ.
ಭಾರತೀಯ ಔಷಧಿ ನಿಯಂತ್ರಣ ಸಂಸ್ಥೆಯು 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಸ್ವದೇಶಿ ನಿರ್ಮಿತ ಝೈಕೋನ್ -ಡಿ ಲಸಿಕೆ ನೀಡಲು ಅನುಮೋದನೆ ನೀಡಿದೆ. ಶೀಘ್ರವೇ ಮಕ್ಕಳಿಗೆ ಲಸಿಕೆ ನೀಡಲು ಸರ್ಕಾರ ಮುಂದಾಗಿದೆ.
ಝೈಕೋವ್ ಡಿ ಲಸಿಕೆಯನ್ನು ಗುಜರಾತ್ ಮೂಲದ ಆಸ್ಟ್ರಾಜೆನೆಕಾ ಕಂಪನಿ ತಯಾರಿಸಿದ್ದು ದೇಶಾದ್ಯಂತ 50 ಕಡೆ ಯಶಸ್ವಿಯಾಗಿ ಟ್ರಯಲ್ ಮುಗಿಸಿದೆ. ಡಿಎನ್ಎ ಪ್ಲಾಸ್ಮಾಯಿಡ್ ಆಧರಿತ ಲಸಿಕೆ ಇದ್ದಾಗಿದ್ದು. ಜುಲೈ1 ರಂದು ಲಸಿಕೆ ಅನುಮತಿಗೆ ಅರ್ಜಿ ಸಲ್ಲಿಸಲಾಗಿತ್ತು. ಸದ್ಯ ಡಿಸಿಜಿಐಯಿಂದ ಅನುಮೋದನೆ ಸಿಕ್ಕಿದೆ. ಇದೀಗ ಮಕ್ಕಳಿಗೆ ಲಸಿಕೆ ನೀಡಲು ಡಿಜಿಸಿಐ ನಿಂದ ಒಪ್ಪಿಗೆ ಸಿಕ್ಕಿದೆ.
ಶೀಘ್ರದಲ್ಲೇ 12 ವರ್ಷದಿಂದ 18 ವರ್ಷದೊಳಗಿನ ಮಕ್ಕಳಿಗೆ ಝೈಕೋವ್ ಲಸಿಕೆ ಸಿಗುವ ಸಾಧ್ಯತೆ ಇದೆ. ಝೈಕೋವ್ ಡಿ ಲಸಿಕೆ ಸೂಜಿ ರಹಿತ ಲಸಿಕೆಯಾಗಿದ್ದು. ಮಕ್ಕಳಿಗೆ ನೋವಾಗದಂತೆ ಮೂರು ಡೋಸ್ ಲಸಿಕೆ ನೀಡಲು ಪ್ಲಾನ್ ಮಾಡಿಕೊಳ್ಳಲಾಗಿದೆ.