Select Your Language

Notifications

webdunia
webdunia
webdunia
webdunia

ಉತ್ತರ ಪ್ರದೇಶ: ಇಂದು 5ನೇ ಹಂತದ ಮತದಾನ

ಉತ್ತರ ಪ್ರದೇಶ: ಇಂದು 5ನೇ ಹಂತದ ಮತದಾನ
ಲಖನೌ , ಸೋಮವಾರ, 27 ಫೆಬ್ರವರಿ 2017 (09:31 IST)
ಉತ್ತರ ಪ್ರದೇಶದಲ್ಲಿಂದು 5 ನೇ ಹಂತದ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು  18,822 ಮತಗಟ್ಟೆಗಳನ್ನು ತೆರೆಯಲಾಗಿದೆ.ಇದರಲ್ಲಿ 2,351 ಮತಗಟ್ಟೆಗಳಿಗೆ ವಿಶೇಷ ಭದ್ರತೆಯನ್ನೊದಗಿಸಲಾಗಿದೆ. 
11 ಜಿಲ್ಲೆಗಳ 51 ಕ್ಷೇತ್ರಗಳಲ್ಲಿ 607 ಅಭ್ಯರ್ಥಿಗಳು ಕಣದಲ್ಲಿದ್ದು 96 ಲಕ್ಷ ಮಹಿಳೆಯರು ಸೇರಿದಂತೆ 1.84ಕೋಟಿ ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ. 
 
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರತಿನಿಧಿಸುವ ಅಮೇಥಿಯಲ್ಲಿ ಗರಿಷ್ಠ 24 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕಪಿಲವಸ್ತು ಮತ್ತು ಇಟಾವಾದಲ್ಲಿ ಕನಿಷ್ಠ ಅಂದರೆ ತಲಾ 6 ಅಭ್ಯರ್ಥಿಗಳಿಂದು ಚುನಾವಣೆಯನ್ನೆದುರಿಸುತ್ತಿದ್ದಾರೆ. 
 
ಮತಗಟ್ಟೆಗಳಿಗೆ ವ್ಯಾಪಕ ಭದ್ರತೆ ಏರ್ಪಡಿಸಲಾಗಿದ್ದು, ಅಕ್ರಮಗಳನ್ನು ತಡೆಯಲು 905 ಡಿಜಿಟಲ್‌ ಕ್ಯಾಮರಾ, 978 ವೀಡಿಯೋ ಕ್ಯಾಮರಾ ಅಳವಡಿಸಲಾಗಿದೆ. 1792 ಕೇಂದ್ರಗಳಲ್ಲಿ ವೆಬ್‌ ವೋಟಿಂಗ್‌ ಜಾರಿಯಲ್ಲಿರಲಿದೆ. 
 
ಅಮೆಥಿ, ಸುಲ್ತಾನ್‌ಪುರ, ಬಲರಾಮ್‌ಪುರ, ಗೊಂಡಾ, ಫೈಜಾಬಾದ್‌, ಅಂಬೇಡ್ಕರ್‌ ನಗರ, ಬಹೈರಿಚ್‌, ಶ್ರವಸ್ತಿ, ಸಿದ್ದಾರ್ಥನಗರ, ಬಸ್ತಿ, ಸಂತ ಕಬೀರನಗರ್‌ ಜಿಲ್ಲೆಗಳಲ್ಲಿ ಮತದಾನ ನಡೆಯುತ್ತಿದ್ದು ಸಚಿವ ವಿನೋದ್ ಕುಮಾರ್ ಅಲಿಯಾಸ್ ಪಂಡಿತ್ ಸಿಂಗ್ (ಗೊಂಡಾ), ತೇಜ್ ನರೈನ್ ಸಿಂಗ್ ಪಾಂಡೆ ಅಲಿಯಾಸ್ ಪವನ್ ಪಾಂಡೆ (ಅಯೋಧ್ಯಾ) ಮತ್ತು ಬಿಎಸ್‌ಪಿ ರಾಜ್ಯಾಧ್ಯಕ್ಷ ರಾಮ್ ಅಚಲ್ ರಾಜ್‌ಭರ್ (ಅಕ್ರಬರ್ಪುರ್) ಪ್ರಮುಖ ಸ್ಪರ್ಧಿಗಳಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗುಜರಾತಿನಲ್ಲಿ ಬಂಧಿತ ಉಗ್ರರ ಕುರಿತು ಸ್ಫೋಟಕ ಮಾಹಿತಿ ಬಹಿರಂಗ