Select Your Language

Notifications

webdunia
webdunia
webdunia
webdunia

ಗುಜರಾತಿನಲ್ಲಿ ಬಂಧಿತ ಉಗ್ರರ ಕುರಿತು ಸ್ಫೋಟಕ ಮಾಹಿತಿ ಬಹಿರಂಗ

ಗುಜರಾತಿನಲ್ಲಿ ಬಂಧಿತ ಉಗ್ರರ ಕುರಿತು ಸ್ಫೋಟಕ ಮಾಹಿತಿ ಬಹಿರಂಗ
ಅಹಮದಾಬಾದ್ , ಸೋಮವಾರ, 27 ಫೆಬ್ರವರಿ 2017 (09:15 IST)
ಗುಜರಾತಿನಲ್ಲಿ ಬಂಧಿತ ಶಂಕಿತ ಉಗ್ರರು ಅಬು ಅಲ್ ಬಾಗ್ದಾದಿ ಮತ್ತು ಒಸಾಮಾ ಬಿನ್ ಲಾಡೆನ್`ನ ಸಿದ್ಧಾಂತ ಪಾಲಕರೆಂದು ತಿಳಿದುಬಂದಿದೆ. ಬಂಧಿತ ಸಹೋದರರನ್ನ ವಾಸೀಮ್ ರಾಮೋದ್ಯಾ ಮತ್ತು ನಯೀಮ್ ರಾಮೋದ್ಯಾ ಎಂದು ಗುರ್ತಿಸಲಾಗಿದೆ.


ಉತ್ತರಪ್ರದೇಶದಲ್ಲಿ ಬಂಧಿತನಾದ ಉಗ್ರ ಮುಫ್ತಿ ಕಸಮ್ ಖಾಸಿ ಫೋನ್ ಕರೆಗಳ ಜಾಡು ಹಿಡಿದ ಪೊಲಿಸರು ಶನಿವಾರ ಖತರ್ನಾಕ್ ಸಹೋರರನ್ನ ಬಂಧಿಸಿ ಜೈಲಿಗಟ್ಟಿದ್ದಾರೆ..ಎಟಿಎಸ್ ಮಾಹಿತಿ ಪ್ರಕಾರ,  ಇಬ್ಬರೂ ಸಹೋದರರಿಗೆ ವಿಶ್ವವನ್ನೇ ಬೆಚ್ಚಿಬೀಳಿಸಿದ್ದ ಭಯೋತ್ಪಾದಕರಾದ ಲಾಡೆನ್ ಮತ್ತು ಬಾಗ್ದಾದಿ ರೋಲ್ ಮಾಡೆಲ್ ಆಗಿದ್ದರು.

ವಾಸಿಂನ ಫೋನ್ ಕರೆ ಟ್ಯಾಪ್ ಮಾಡಿದ್ದ ಪೊಲೀಸರಿಗೆ ಆತನ ದೇಶವಿರೋಧಿ ಕೃತ್ಯದ ಮಾಹಿತಿ ಸಿಕಿತ್ತು. 160 ಗ್ರಾಂ ಸ್ಫೋಟಕವನ್ನ ಖರೀದಿಸಿದ್ದ ವಾಸಿಂ, ಇಷ್ಟು ಸಾಕಾಗುವುದಿಲ್ಲ 400 ಗ್ರಾಂ ಸ್ಫೋಟಕ ಬೇಕು ಎಂದು ಬೇಡಿಕೆ ಇಟ್ಟಿದ್ದ. ಇದರ ಜೊತೆ ಪಟಾಕಿಗಳನ್ನೂ ಖರೀದಿಸಿ ಸ್ಫೋಟಕ್ಕೆ ಬಳಸುವಂತೆ ಅನಾಮಿಕನಿಂದ ಸೂಚನೆಯೂ ಬಂದಿತ್ತು.

ಇಂಡಿಯಾ ಟುಡೇ ವರದಿ ಪ್ರಕಾರ ಫೋನಿನ ವಿವರಣೆ ಇಂತಿದೆ.

ವಾಸೀಂ: ದಾಳಿ ನಡೆಸಲು ನಾವು ಸಜ್ಜಾಗುತ್ತಿದ್ದೇವೆ

ಹ್ಯಾಂಡ್ಲರ್: ಕಫೀರರನ್ನ ಕೊಂದು ವಿಡಿಯೋ ಮಾಡು

ವಾಸೀಂ: ನಾವು ವಾಸವಿರುವ ಸ್ಥಳದಿಂದ 30 ಕಿ.ಮೀ ದೂರದಲ್ಲಿರುವ ಕಫೀರನನ್ನ ನಾವು ಕೊಲ್ಲಬೇಕಿದೆ.

 

ಮತ್ತೊಂದು ಕರೆ:

ಹ್ಯಾಂಡ್ಲರ್: ವಾಸೀಂ ನೀನು ಸ್ವಲ್ಪ ಸಮಯ ಕಾದು ನೋಡು

ಹ್ಯಾಂಡ್ಲರ್: ಹೆಚ್ಚಿನ ಸ್ಫೋಟಕ ಸದ್ಯದಲ್ಲೇ ಬರಲಿದ್ದು ಅದಕ್ಕಾಗಿ ಕಾಯುತ್ತಿದ್ದೇವೆ

 

ಮತ್ತೊಂದು ಕರೆ

ಹ್ಯಾಂಡ್ಲರ್: ಬ್ರದರ್ ನಾವು ಒಂದು ಸ್ಥಳದಲ್ಲಿ ಸ್ಪೋಟಕಗಳನ್ನ ಪಡೆಯಬಹದು.. ಬಳಿಕ ನೀನು ಅದನ್ನ ನಿನ್ನ ಟಾರ್ಗೆಟ್ ಸ್ಥಳದಲ್ಲಿ ಅಳವಡಿಸು

 
ಈ ರೀತಿ ದುಷ್ಕೃತ್ಯಕ್ಕೆ ಸಂಚು ರೂಪಿಸಿದ್ದ ವಾಸೀಂ ಮತ್ತು ಆತನ ಸಹೋದರರನ್ನ ಟಿಎಸ್ ಅಧಿಕಾರಿಗಳು ಬಂಧಿಸಿದ್ದಾರೆ.

 

Share this Story:

Follow Webdunia kannada

ಮುಂದಿನ ಸುದ್ದಿ

ವಿದ್ಯುತ್ ತಂತಿ ಕಡಿದು ಅನ್ನದಾತ ಆತ್ಮಹತ್ಯೆ