ನವದೆಹಲಿ: ಕೇಂದ್ರ ಬಜೆಟ್ 2025 ರನ್ನು ನಿರ್ಮಲಾ ಸೀತಾರಾಮನ್ ಮಂಡಿಸಿದ್ದು ಕ್ಯಾನ್ಸರ್ ರೋಗಿಗಳಿಗೆ ಈ ಬಜೆಟ್ ನಲ್ಲಿ ಬಿಗ್ ರಿಲೀಫ್ ನೀಡಲಾಗಿದೆ. ವಿವರಗಳಿಗೆ ಇಲ್ಲಿ ನೋಡಿ.
ದೇಶದಾದ್ಯಂತ ಈಗ ಕ್ಯಾನ್ಸರ್ ಪೀಡಿತ ಅನೇಕರಿದ್ದಾರೆ. ಅವರ ಚಿಕಿತ್ಸೆ ಇನ್ನಷ್ಟು ಸುಲಭವಾಗಲಿದೆ. ಸಾಮಾನ್ಯವಾಗಿ ಕ್ಯಾನ್ಸರ್ ರೋಗಿಗಳಿಗೆ ನೀಡಲಾಗುವ ಔಷಧಿಯ ಬೆಲೆಯೂ ಹೆಚ್ಚಿರುತ್ತದೆ. ಆದರೆ ಇದೀಗ ನಿರ್ಮಲಾ ಬಜೆಟ್ ನಲ್ಲಿ ಘೋಷಿಸಿರುವ ವಿನಾಯ್ತಿಯಿಂದ ಕ್ಯಾನ್ಸರ್ ಔಷಧಿ ಕೊಂಚ ಅಗ್ಗವಾಗಲಿದೆ.
ಔಷಧೀಯ ಕಂಪನಿಗಳು ನಡೆಸುವ ರೋಗಿ ನೆರವು ಕಾರ್ಯಗಳಲ್ಲಿ ಕ್ಯಾನ್ಸರ್ ರೋಗಿಗಳಿಗೆ ಉಚಿತವಾಗಿ ಔಷಧಿಗಳನ್ನು ನೀಡಿದರೆ ಅವುಗಳಿಗೆ ಕಸ್ಟಮ್ಸ್ ಸುಂಕದಿಂದ ವಿನಾಯ್ತಿ ನೀಡುವುದಾಗಿ ಘೋಷಿಸಿದ್ದಾರೆ. ಹೆಚ್ಚುವರಿಯಾಗಿ 37 ಔಷಧಿಗಳು ಮತ್ತು 13 ರೋಗಿ ನೆರವು ಕಾರ್ಯಕ್ರಮಗಳನ್ನು ಈ ಪಟ್ಟಿಗೆ ಸೇರಿಸುವುದಾಗಿ ಅವರು ಘೋಷಿಸಿದ್ದಾರೆ.
ಮೋದಿ ಸರ್ಕಾರ ಮೂರನೇ ಬಾರಿಗೆ ಅಧಿಕಾರಿ ಸ್ವೀಕರಿಸಿದ ಬಳಿಕ ಮಂಡನೆಯಾಗುತ್ತಿರುವ ಮೊದಲ ಪೂರ್ಣಪ್ರಮಾಣದ ಬಜೆಟ್ ಇದಾಗಿದೆ. ಸತತ 8 ನೇ ಬಾರಿಗೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡುತ್ತಿದ್ದಾರೆ.