Select Your Language

Notifications

webdunia
webdunia
webdunia
webdunia

ನಂಬಿದ್ರೆ ನಂಬಿ ಬಿಟ್ರೆ ಬಿಡಿ: ಕೇವಲ 99 ರೂ.ಗಳಿಗೆ ಸ್ಮಾರ್ಟ್‌ಫೋನ್ ಲಭ್ಯ

ನಮೋಟೆಲ್ ಅಚ್ಚೇ ದಿನ್
ನವದೆಹಲಿ , ಬುಧವಾರ, 18 ಮೇ 2016 (17:46 IST)
ವಿಶ್ವದ ಅತಿ ಕಡಿಮೆ ದರದ ಸ್ಮಾರ್ಟ್‌ಫೋನ್ ಎಂದು ಬಿಂಬಿಸಿದ್ದ ಫ್ರೀಡಂ-251 ಕಾಣೆಯಾಗಿದೆ. ಇದೀಗ ನಮೋಟೆಲ್ ಅಚ್ಚೇದಿನ್ ಎನ್ನುವ ಕಂಪೆನಿ ಕೇವಲ 99 ರೂಪಾಯಿಗಳಿಗೆ ಸ್ಮಾರ್ಟ್‌ಫೋನ್ ನೀಡುವುದಾಗಿ ಘೋಷಿಸಿದೆ. 
ವರದಿಗಳ ಪ್ರಕಾರ, ಬೆಂಗಳೂರು ಮೂಲದ ನಮೋಟೆಲ್ ಕಂಪೆನಿ, ನಮೋಟೆಲ್ ಅಚ್ಚೇದಿನ್ ಎನ್ನುವ ಮಾಡೆಲ್‌ ಸ್ಮಾರ್ಟ್‌ಫೋನ್‌ನ್ನು ಕೇವಲ 99 ರೂಪಾಯಿಗಳಿಗೆ ನೀಡುತ್ತಿದ್ದು, ವಿಶ್ವದ ಅತಿ ಕಡಿಮೆ ದರದ ಸ್ಮಾರ್ಟ್‌ಫೋನ್ ಇದಾಗಿದೆ ಎಂದು ಕಂಪೆನಿ ತಿಳಿಸಿದೆ. 
 
ಕೆಲ ತಿಂಗಳುಗಳ ಹಿಂದೆ ನೋಯಿಡಾ ಮೂಲದ ರಿಂಗಿಂಗ್ ಬೆಲ್ಸ್ ಕಂಪೆನಿ ಫ್ರಿಡಂ-251 ಎನ್ನುವ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬಿಡುಗಡೆಗೊಳಿಸಿ, ಕೇವಲ 251 ರೂಪಾಯಿಗಳಿಗೆ ನೀಡುವುದಾಗಿ ಘೋಷಿಸಿತ್ತು.
 
ಏತನ್ಮಧ್ಯೆ, ನಮೋಟೆಲ್ ಅಚ್ಚೇದಿನ್ ಸ್ಮಾರ್ಟ್‌ಫೋನ್ ಕೇವಲ 99 ರೂಪಾಯಿಗಳಿಗೆ ನೀಡುವುದಾಗಿ ಪ್ರಕಟಿಸಿದೆ. 
 
ವರದಿಗಳ ಪ್ರಕಾರ, ನಮೋಟೆಲ್ ಅಚ್ಚೇದಿನ್ ಮಾಡೆಲ್ ಸ್ಮಾರ್ಟ್‌ಫೋನ್ 4-ಇಂಚ್ ಡಿಸ್‌ಪ್ಲೇ ಹೊಂದಿದ್ದು 5.1 ಲೊಲಿಪಾಪ್ ಆಂಡ್ರೈಡ್‌ನಿಂದ ಕಾರ್ಯನಿರ್ವಹಿಸುತ್ತದೆ ಎಂದು ಕಂಪೆನಿ ತಿಳಿಸಿದೆ. 
 
ಸ್ಮಾರ್ಟ್‌ಫೋನ್‌ನಲ್ಲಿ 1.3 ಜಿಎಚ್‌ಝಡ್‌ ಕ್ವಾಡ್‌ಕೋರ್ ಪ್ರೊಸೆಸರ್ ಮತ್ತು 1 ಜಿಬಿ ರಾಮ್ ಹಾಗೂ ಡುವೆಲ್ ಸಿಮ್‌ಗೆ ಬೆಂಬಲಿಸುತ್ತದೆ ಎನ್ನಲಾಗಿದೆ.
 
ಇತರ ವಿಶಿಷ್ಠತೆಗಳೆಂದರೆ 4ಜಿಬಿ ಇಂಟರ್ನಲ್ ‌ಸ್ಟೋರೇಜ್, 3ಜಿ ಕನೆಕ್ಟಿವಿಟಿ, 2ಎಂಪಿ ರಿಯರ್ ಮತ್ತು ವಿಜಿಎ ಫ್ರಂಟ್ ಕ್ಯಾಮರಾ, 1325ಎಂಎಎಚ್ ಬ್ಯಾಟರಿ ಸೌಲಭ್ಯ ಹೊಂದಿದೆ.
 
ಸ್ಮಾರ್ಟ್‌ಫೋನ್ ಖರೀದಿಸುವ ಗ್ರಾಹಕರ ನೋಂದಣಿ ಕಂಪೆನಿಯ ನಮೋಟೆಲ್ ವೆಬ್‌ಸೈಟ್‌ನಲ್ಲಿ ಆರಂಭವಾಗಿದ್ದು, ಮೇ 27 ರವರೆಗೆ ಮುಂದುವರಿಯಲಿದೆ ಎಂದು ಕಂಪೆನಿಯ ವಕ್ತಾರರು ತಿಳಿಸಿದ್ದಾರೆ.

 
ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.
 

Share this Story:

Follow Webdunia kannada

ಮುಂದಿನ ಸುದ್ದಿ

ವಸೂಲಾಗದ ಸಾಲದಿಂದ ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ಭಾರೀ ನಷ್ಟ