Select Your Language

Notifications

webdunia
webdunia
webdunia
webdunia

ವಸೂಲಾಗದ ಸಾಲದಿಂದ ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ಭಾರೀ ನಷ್ಟ

ವಸೂಲಾಗದ ಸಾಲದಿಂದ  ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ಭಾರೀ ನಷ್ಟ
ನವದೆಹಲಿ , ಬುಧವಾರ, 18 ಮೇ 2016 (17:37 IST)
ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಿಂದಿನ ವಿತ್ತೀಯ ವರ್ಷದಲ್ಲಿ ನಾಲ್ಕನೇ ತ್ರೈಮಾಸಿಕದಲ್ಲಿ 306. 56 ಕೋಟಿ ರೂ. ನಿವ್ವಳ ಲಾಭ ಗಳಿಸಿತ್ತು. ಆದರೆ ಈ ವರ್ಷ ಮಾರ್ಚ್ 31ರಂದು ಮುಕ್ತಾಯವಾದ ಅದರ ನಾಲ್ಕನೇ ತ್ರೈಮಾಸಿಕದಲ್ಲಿ 5367.14 ಕೋಟಿ ರೂ. ನಿವ್ವಳ ನಷ್ಟವನ್ನು ಅನುಭವಿಸಿದೆ.

ವಸೂಲಾಗದ ಸಾಲಗಳ ಹೆಚ್ಚಳದ ಕಾರಣದಿಂದಾಗಿ ಇಷ್ಟೊಂದು ಪ್ರಮಾಣದ ನಷ್ಟ ಅನುಭವಿಸಿದ್ದು, ಇದು ಭಾರತದ ಬ್ಯಾಂಕ್ ಇತಿಹಾಸದಲ್ಲೇ ಅತೀ ದೊಡ್ಡ ತ್ರೈಮಾಸಿಕದ ನಷ್ಟವೆನಿಸಿದೆ.
 
 ಕಳೆದ ವರ್ಷ 13, 455. 65 ಕೋಟಿ ರೂ.ಗಳಿದ್ದ ಒಟ್ಟು ಆದಾಯವು 1.33 ಶೇಕಡ ಕುಸಿದು 13, 276.19 ಕೋಟಿಗೆ ಇಳಿಮುಖವಾಗಿದೆ. ಹಿಂದಿನ ವಿತ್ತೀಯ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಎನ್‌ಪಿಎ 3836.19 ಕೋಟಿಗೆ ಹೋಲಿಸಿದರೆ ಈ ತ್ರೈಮಾಸಿಕದಲ್ಲಿ ಎನ್‌ಪಿಎ ಮೂರು ಪಟ್ಟು ಹೆಚ್ಚಿ 10, 485.23 ಕೋಟಿಗೆ ಬೆಳೆದಿದೆ.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕೆಂಟುಕಿ ಪ್ರೈಮರಿ ಚುನಾವಣೆಯಲ್ಲಿ ಸ್ಯಾಂಡರ್ಸ್ ವಿರುದ್ಧ ಹಿಲರಿ ಕ್ಲಿಂಟನ್ ಗೆಲುವು