Select Your Language

Notifications

webdunia
webdunia
webdunia
webdunia

ಕೆಂಟುಕಿ ಪ್ರೈಮರಿ ಚುನಾವಣೆಯಲ್ಲಿ ಸ್ಯಾಂಡರ್ಸ್ ವಿರುದ್ಧ ಹಿಲರಿ ಕ್ಲಿಂಟನ್ ಗೆಲುವು

ಕೆಂಟುಕಿ ಪ್ರೈಮರಿ ಚುನಾವಣೆಯಲ್ಲಿ ಸ್ಯಾಂಡರ್ಸ್ ವಿರುದ್ಧ ಹಿಲರಿ ಕ್ಲಿಂಟನ್ ಗೆಲುವು
ವಾಷಿಂಗ್ಟನ್: , ಬುಧವಾರ, 18 ಮೇ 2016 (17:14 IST)
ಹಿಲರಿ ಕ್ಲಿಂಟನ್ ಕೆಂಟುಕಿಯ ಡೆಮಾಕ್ರಟಿಕ್ ಅಧ್ಯಕ್ಷೀಯ ಪ್ರೈಮರಿ ಚುನಾವಣೆಯಲ್ಲಿ ಬರ್ನೀ ಸ್ಯಾಂಡರ್ಸ್ ಅವರ ವಿರುದ್ಧ ಸ್ವಲ್ಪದರಲ್ಲಿ ಗೆದ್ದಿದ್ದಾರೆ ಎಂದು ಚುನಾವಣೆ ಮಂಡಳಿ ಮಂಗಳವಾರ ತಿಳಿಸಿದೆ. ಇವರಿಬ್ಬರ ನಡುವೆ ಬಿಗಿಯಾದ ಸ್ಪರ್ಧೆಯಿಂದ ಡೆಮಾಕ್ರ್ಯಾಟ್ಸ್ ಮತದಾರರು ಹೇಗೆ ವಿಭಜನೆಯಾಗಿದ್ದಾರೆಂದು ತೋರಿಸುತ್ತದೆ.
 
ನೆರೆಯ ವೆಸ್ಟ್ ವಿರ್ಜಿನಿಯಾ ಮತ್ತು ಇಂಡಿಯಾನಾ ಎರಡೂ ಸ್ಯಾಂಡರ್ಸ್ ಪಾಲಾದ ನಂತರ  ಕೆಂಟುಕಿ ಕ್ಲಿಂಟನ್ ಅವರಿಗೆ ಅನುಕೂಲಕರ ಪ್ರದೇಶವಾಗಿರಲಿಲ್ಲ. ಆದರೆ ಕೆಂಟುಕಿಯಲ್ಲಿ ಸುಭದ್ರ ಗೆಲುವಿನಿಂದ ಕ್ಲಿಂಟನ್‌ಗೆ ಉಸಿರಾಟಕ್ಕೆ ಅವಕಾಶ ಸಿಕ್ಕಿದೆ.
 
 ಈ ನಡುವೆ ರಿಪಬ್ಲಿಕನ್ ಅಭ್ಯರ್ಥಿ ಟ್ರಂಪ್ ತನ್ನ ಚುನಾವಣೆ ಪ್ರಚಾರ ಆಯೋಜನೆ ಆರಂಭಿಸಿದ್ದಾರೆ. ರಿಪಬ್ಲಿಕನ್ ರಾಷ್ಟ್ರೀಯ ಸಮಿತಿ ಜತೆ ಅವರು ಜಂಟಿ ಫಂಡ್ ಸಂಗ್ರಹದ ಒಪ್ಪಂದಕ್ಕೆ ಸಹಿ ಹಾಕಿದರು. 
ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.
ಇಕ್ವೆಡಾರ್‌ನಲ್ಲಿ 6.7 ತೀವ್ರತೆಯ ಭೂಕಂಪ: ಸುನಾಮಿ ಬೆದರಿಕೆ ಇಲ್ಲ-http://goo.gl/SkjXcb

Share this Story:

Follow Webdunia kannada

ಮುಂದಿನ ಸುದ್ದಿ

ಸೌದಿ ವಿರುದ್ಧ ದಾವೆಗೆ ಅವಕಾಶ ನೀಡುವ ಮಸೂದೆಗೆ ಸೆನೆಟ್ ಅಸ್ತು