ಸೆಪ್ಟೆಂಬರ್ 11ರ ದಾಳಿಯ ಬಲಿಪಶುಗಳ ಕುಟುಂಬಗಳು ತಮಗುಂಟಾದ ಹಾನಿಗಾಗಿ ಸೌದಿ ಅರೇಬಿಯಾ ಸರ್ಕಾರದ ಮೇಲೆ ದಾವೆ ಹೂಡುವುದಕ್ಕೆ ಅವಕಾಶ ನೀಡುವ ಶಾಸನಕ್ಕೆ ಅಮೆರಿಕ ಸೆನೆಟ್ ಮಂಗಳವಾರ ಅನುಮೋದನೆ ನೀಡಿದೆ. ಇದರಿಂದ ಅಮೆರಿಕ ಸೆನೆಟ್ ಶ್ವೇತಭವನದ ಜತೆ ಜಟಾಪಟಿಗೆ ಇಳಿದಿದ್ದು, ಶ್ವೇತಭವನ ಈ ಶಾಸನದ ವಿರುದ್ಧ ವಿಟೊ ಹಕ್ಕು ಚಲಾಯಿಸುವುದಾಗಿ ಬೆದರಿಸಿದೆ.
2001ರ ದಾಳಿಗಳಿಗೆ ತಾವು ಹೊಣೆಯಲ್ಲ ಎಂದು ಸೌದಿಗಳು ನಿರಾಕರಿಸುತ್ತಿದ್ದು ಈ ಮಸೂದೆಯನ್ನು ಪ್ರಬಲವಾಗಿ ವಿರೋಧಿಸಿದ್ದಾರೆ. ಈ ಮಸೂದೆ ಕಾನೂನಾದರೆ ಅಮೆರಿಕದ ಸಾಲಪತ್ರಗಳು ಮತ್ತಿತರ ಅಮೆರಿಕ ಆಸ್ತಿಗಳು ಸೇರಿದಂತೆ 750 ಶತಕೋಟಿ ಡಾಲರ್ ಮಾರಾಟ ಮಾಡುವುದಾಗಿ ಸೌದಿ ಬೆದರಿಸಿದೆ.
ಭಯೋತ್ಪಾದಕ ಕೃತ್ಯದ ಪ್ರಾಯೋಜಕರ ವಿರುದ್ಧ ನ್ಯಾಯ ಅಥವಾ ಜಾಸ್ಟಾ ಸರ್ವಾನುಮತದ ಧ್ವನಿಮತದಿಂದ ಸೆನೆಟ್‌ನಲ್ಲಿ ಅಂಗೀಕಾರಗೊಂಡಿತು. ಇದನ್ನು ಅಮೆರಿಕ ಪ್ರಾತಿನಿಧಿಕ ಸದನದಲ್ಲಿ ಮುಂದೆ ಪ್ರಸ್ತಾಪಿಸಲಾಗುತ್ತದೆ ಮತ್ತು ನ್ಯಾಯಾಂಗ ಸಮಿತಿಯು ಈ ಕುರಿತು ವಿಚಾರಣೆ ನಡೆಸುತ್ತದೆ ಎಂದು ಸಮಿತಿ ಹೇಳಿದೆ.
ಇದು ಕಾನೂನಾಗಿ ಪರಿವರ್ತನೆಯಾದರೆ ಅಮೆರಿಕದ ನೆಲದಲ್ಲಿ ಭಯೋತ್ಪಾದಕ ಕೃತ್ಯಗಳಲ್ಲಿ ಒಳಗೊಂಡಿರುವ ದೇಶಗಳ ವಿರುದ್ಧ ದಾವೆಗಳಿಗೆ ತಡೆನೀಡುವ ಸಾರ್ವಬೌಮ ರಕ್ಷಣೆಯನ್ನು ಜಾಸ್ಟಾ ತೆಗೆದುಹಾಕುತ್ತದೆ.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ