Publish Date: Wed, 18 May 2016 (16:18 IST)
Updated Date: Wed, 18 May 2016 (16:40 IST)
ಮುಖ್ಯಮಂತ್ರಿಯವರು ಸರಿಯಾಗಿ ಮಾತನಾಡುವುದನ್ನು ಕಲಿಯಲ್ಲಿ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಸಿಎಂ ಸಿದ್ದರಾಮಯ್ಯರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ರಾಜ್ಯ ಸರಕಾರ ಮೂರು ವರ್ಷ ಆಡಳಿತವನ್ನು ಮುಗಿಸಿದ್ದು, ಮುಂದಿನ ಎರಡು ವರ್ಷ ಸರಿಯಾದ ಆಡಳಿತ ನೀಡುವ ಕುರಿತು ನಮಗೆ ನಂಬಿಕೆ ಇಲ್ಲ. ಈ ಕುರಿತು ಪದವೀಧರರು ನಂಬುತ್ತಾರೂ ಇಲ್ಲೂ ಗೊತ್ತಿಲ್ಲ. ಪಕ್ಷಗಳಿಂದ ದೂರವಾದ ಅಭ್ಯರ್ಥಿಗಳನ್ನು ಹತ್ತಿರ ಸೆಳೆಯುವ ಕುತಂತ್ರವನ್ನು ರಾಜ್ಯ ಸರಕಾರ ಮಾಡುತ್ತದೆ ಎಂದು ಆರೋಪಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಮ್ಮನ್ನು ಎಕವಚನದಲ್ಲಿ ಕರೆಯುತ್ತಾರೆ. ಮೊದಲು ಅವರು ಮಾತನಾಡುವುದನ್ನು ಕಲಿಯಲಿ. ಕೇಂದ್ರ ಸರಕಾರ ನೀಡಿರುವ ಅನುದಾನವನ್ನು ಸರಿಯಾಗಿ ಬಳಕೆ ಮಾಡಿಕೊಳ್ಳದ ಅವರು ಬಿಜಿಪಿಯವರ ಮೇಲೆ ಗೂಬೆ ಕುರಿಸುವ ಕೆಲಸ ಮಾಡುತ್ತಿದ್ದಾರೆ. ಕೇಂದ್ರದ ಅನುದಾನ ಸರಿಯಾಗಿ ಬಳಕೆಯಾಗದ ಕುರಿತು ನನ್ನ ಬಳಿ ಲೆಕ್ಕವಿದೆ. ನನ್ನ ಲೆಕ್ಕ ಸರಿಯಾಗಿದ್ದರೆ ರಾಜೀನಾಮೆ ನೀಡುತ್ತಿರಾ ಎಂದು ಈಶ್ವರಪ್ಪ ಮೈಸೂರಿನಲ್ಲಿ ಸವಾಲ್ ಎಸೆದಿದ್ದಾರೆ.
ಕಳಸಾ ಬಂಡೂರಿ ಮತ್ತು ಮಹದಾಯಿ ಯೋಜನೆ ಜಾರಿ ಕುರಿತಂತೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿಯವರದ್ದು ಉತ್ತರನ ಪೌರುಷ ಎಂದು ಲೇವಡಿ ಮಾಡಿದ್ದರು. ಈ ಕುರಿತು ಪ್ರತಿಕ್ರಿಯಿಸಿದ ಈಶ್ವರಪ್ಪ, ರಾಜ್ಯ ಸರಕಾರ ಬೃಹನ್ನಳೆ ನಾಟಕವಾಡುತ್ತಿದೆ ಎಂದು ತೀರುಗೆಟು ನೀಡಿದ್ದಾರೆ.