Publish Date: Fri, 01 Sep 2017 (09:24 IST)
Updated Date: Fri, 01 Sep 2017 (09:27 IST)
ನವದೆಹಲಿ: ರಾಜ್ಯದಲ್ಲಿರುವಂತೆ ಕೇಂದ್ರ ಸರ್ಕಾರದಲ್ಲೂ ಸಚಿವ ಸಂಪುಟ ವಿಸ್ತರಣೆ ತಯಾರಿ ಜೋರಾಗಿ ನಡೆಯುತ್ತಿದ್ದ ಜಲ ಸಂಪನ್ಮೂಲ ಸಚಿವೆ ಉಮಾಭಾರತಿ ರಾಜೀನಾಮೆ ನೀಡಿದ್ದಾರೆ.
ಉಮಾಭಾರತಿ ಜತೆಗೆ ರಾಜೀವ್ ಪ್ರತಾಪ್ ರೂಡಿ, ರಾಧಾಮೋಹನ್ ಸಿಂಗ್, ಗಿರಿರಾಜ್ ಸಿಂಗ್, ಸಂಜೀವ್ ಬಲಿಯಾನ್ ಕೂಡಾ ತಮ್ಮ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇನ್ನೂ ಕೆಲವು ಸಚಿವರು ರಾಜೀನಾಮೆ ನೀಡುವ ನಿರೀಕ್ಷೆಯಿದೆ.
ಗುಜರಾತ್, ಕರ್ನಾಟಕ ರಾಜ್ಯಗಳಲ್ಲಿ ನಡೆಯಲಿರುವ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ರಾಜ್ಯಗಳ ಸಂಸದರಿಗೆ ಹೆಚ್ಚಿನ ಸಚಿವ ಸ್ಥಾನ ನೀಡುವ ಯೋಜನೆ ಬಿಜೆಪಿ ವರಿಷ್ಠರಿಗಿದೆ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ