Select Your Language

Notifications

webdunia
webdunia
webdunia
webdunia

ಉಡುಪಿ: ಯುವತಿಗೆ ರಸ್ತೆ ಮಧ್ಯದಲ್ಲೇ ಇರಿದು ಪ್ರೇಮಿ ಆತ್ಮಹತ್ಯೆ ಯತ್ನ!

udupi
bengaluru , ಸೋಮವಾರ, 30 ಆಗಸ್ಟ್ 2021 (19:15 IST)
ನಿಶ್ಚಿತಾರ್ಥ ಆಗಿದ್ದ ಯುವತಿಗೆ ರಸ್ತೆ ಮಧ್ಯದಲ್ಲೇ ಇರಿದ ಪ್ರೇಮಿ ತಾನು ಕೂಡ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಭೀಕರ ಘಟನೆ ಉಡುಪಿಯ
ಲ್ಲಿ ನಡೆದಿದೆ.
ಸೌಮ್ಯಶ್ರೀ ಭಂಡಾರಿ ಮತ್ತು ಮೆಡಿಕಲ್ ನಲ್ಲಿ ಕೆಲಸ ಮಾಡುವ ಯುವಕ ಇಬ್ಬರು ರಕ್ತದ ಮಡುವಿನಲ್ಲಿ ರಸ್ತೆಯ ಮಧ್ಯೆದಲ್ಲೇ ಬಿದ್ದಿದ್ದು, ಚಿಂತಾಜನಕ ಸ್ಥಿತಿಯಲ್ಲಿ ಇರುವ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.
ಉಡುಪಿಯ ಸಂತೆಕಟ್ಟೆ ಬಳಿ ಸ್ಕೂಟಿಯಲ್ಲಿ ಬರುತ್ತಿದ್ದ ಯುವತಿಯನ್ನು ತಡೆದು ನಿಲ್ಲಿಸಿದ ಯುವಕ ಕುತ್ತಿಗೆಗೆ ಚಾಕು ಇರಿದಿದ್ದಾನೆ. ಯುವತಿ ಕುಸಿದು ಬೀಳುತ್ತಿದ್ದಂತೆ ಚಾಕು ಇರಿದುಕೊಂಡು ಯುವಕ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ವಾರದ ಹಿಂದೆ ಯುವತಿಗೆ ನಿಶ್ಚಿತಾರ್ಥ ಆಗಿತ್ತು. ಈ ಹಿನ್ನೆಲೆಯಲ್ಲಿ ಯುವಕ ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ. ಯುವಕ ಹಾಗೂ ಯುವತಿ ಆರೋಗ್ಯ ಸ್ಥಿತಿ ಗಂಭೀರವಾಗಿದೆ.
ನಗರದ ಖಾಸಗಿ ಆಸ್ಪತ್ರೆಗೆ ಇಬ್ಬರು ವರ್ಗಾಯಿಸಲಾಗಿದ್ದು, ಉಡುಪಿ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ 973 ಕೊರೊನಾ ಸೋಂಕು ದೃಢ: ಬೆಂಗಳೂರಿನಲ್ಲಿ ಕೇವಲ 264