ಟೆಲಿಕಾಂ ಅಧಿಕಾರಿಯ ಸೋಗಿನಲ್ಲಿ ಸುಧಾ ಮೂರ್ತಿಗೆ ವಂಚಿಸಲು ಯತ್ನ

Sampriya
ಸೋಮವಾರ, 22 ಸೆಪ್ಟಂಬರ್ 2025 (18:50 IST)
Photo Credit X
ಬೆಂಗಳೂರು: ಲೇಖಕಿ, ಇನ್ಫೋಸಿಸ್ ಮುಖ್ಯಸ್ಥೆ, ರಾಜ್ಯಸಭಾ ಸಂಸದೆ ಸುಧಾ ಮೂರ್ತಿ ಅವರಿಗೆ  ಟೆಲಿಕಾಂ ಇಲಾಖೆಯ ಅಧಿಕಾರಿಯ ಸೋಗಿನಲ್ಲಿ ವಂಚನೆ ಮಾಡಲು ಯತ್ನಿಸಿದ ಬಗ್ಗೆ ದೂರು ದಾಖಲಾಗಿದೆ. 

ಸೆಪ್ಟೆಂಬರ್ 5, 2025 ರಂದು ಸುಧಾಮೂರ್ತಿ ಅವರಿಗೆ ಕರೆ ಮಾಡಿದ ವಂಚಕರು, ತಮ್ಮ ಮೊಬೈಲ್ ಸೇವೆಗಳ ಸಂಪರ್ಕ ಕಡಿತಗೊಳಿಸುವುದಾಗಿ ಹೇಳಿ, ಸೂಕ್ಷ್ಮ ವೈಯಕ್ತಿಕ ಮಾಹಿತಿಯನ್ನು ಪಡೆಯಲು ಪ್ರಯತ್ನಿಸಿದರು ಎಂದು ಪೊಲೀಸ್ ದೂರಿನಲ್ಲಿ ದಾಖಲಾಗಿದೆ.

ಫೋನ್ ಸಂಖ್ಯೆಯನ್ನು ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಿಲ್ಲ ಎಂದು ಸುಧಾಮೂರ್ತಿಗೆ ಹೇಳಿದ ವಂಚಕರು, ಮಧ್ಯಾಹ್ನದ ವೇಳೆ ಮೊಬೈಲ್ ಸೇವೆಗಳು ಕಡಿತಗೊಳ್ಳುತ್ತದೆ. 

ಅದಲ್ಲದೆ ನಿಮ್ಮ ಮೊಬೈಲ್ ಸಂಖ್ಯೆ  ಅಶ್ಲೀಲ ವಿಷಯಕ್ಕೆ ಲಿಂಕ್ ಮಾಡಲಾಗಿದೆ ಎನ್ನುವ ಮೂಲಕ ವೈಯಕ್ತಿಕ ಮಾಹಿತಿಯನ್ನು ಹೊರತೆಗೆಯಲು ಯತ್ನಿಸಿದ್ದಾರೆ. 

ಫೋನ್ ಕರೆ ವೇಳೆ ವಂಚಕರು ಮೂರ್ತಿ ಅವರಿಗೆ ಬೆದರಿಕೆ ಮತ್ತು ನಿಂದನೆ ಮಾಡಿದ್ದಾರೆ ಎಂದು ವರದಿಯಾಗಿದೆ.

2025 ರ ಸೆಪ್ಟೆಂಬರ್ 20 ರಂದು ಬೆಂಗಳೂರು ಸೈಬರ್ ಪೊಲೀಸರಿಗೆ ಈ ಹುಸಿ ಕರೆಗೆ ಸಂಬಂಧಿಸಿದಂತೆ ದೂರು ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲು ತನಿಖೆ ನಡೆಸಲಾಗುತ್ತಿದೆ.

ಕರೆಯು +91 9242142562 ಸಂಖ್ಯೆಯಿಂದ ಹುಟ್ಟಿಕೊಂಡಿದೆ, ಇದನ್ನು ಕಾಲರ್ ಐಡಿ ಅಪ್ಲಿಕೇಶನ್ ಟ್ರೂಕಾಲರ್‌ನಲ್ಲಿ "ಟೆಲಿಕಾಂ ಇಲಾಖೆ" ಎಂದು ಗುರುತಿಸಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕಲಾಲೋಕ ಮಳಿಗೆ, ಏನೆಲ್ಲಾ ಸಿಗಲಿದೆ ಗೊತ್ತಾ

ಕಾರು ಸ್ಫೋಟದ ಹಿಂದಿನ ಪ್ರತಿಯೊಬ್ಬ ಅಪರಾಧಿಯನ್ನು ಭೇಟೆಯಾಡಿ: ಅಮಿತ್ ಶಾ

ದೆಹಲಿಯಲ್ಲಿ ಕಾರು ಸ್ಫೋಟ: ರಾಜ್ಯದ ಈ ಜಿಲ್ಲೆಯಲ್ಲಿ ಹೆಚ್ಚಿನ ಭದ್ರತೆ

ಇದೇ ಕಾರಣಕ್ಕಾ ಪರಪ್ಪನ ಅಗ್ರಹಾರದಲ್ಲಿದ್ದ ಉಗ್ರನಿಗೆ ಮೊಬೈಲ್ ಕೊಡಲಾಯಿತೇ

ದೆಹಲಿ ಕಾರು ಸ್ಫೋಟ ತನಿಖೆಯಲ್ಲಿ ಮಹತ್ವದ ಬೆಳವಣಿಗೆ

ಮುಂದಿನ ಸುದ್ದಿ
Show comments