Select Your Language

Notifications

webdunia
webdunia
webdunia
webdunia

ಪತ್ನಿಯರ ಬಗ್ಗೆ ತಿಳಿದುಕೊಂಡ್ಲು ಅಂತಾ 4ನೇ ಪತ್ನಿಗೆ ತ್ರಿವಳಿ ತಲಾಖ್

ಪತ್ನಿಯರ ಬಗ್ಗೆ ತಿಳಿದುಕೊಂಡ್ಲು ಅಂತಾ 4ನೇ ಪತ್ನಿಗೆ ತ್ರಿವಳಿ ತಲಾಖ್
ಭೋಪಾಲ್ , ಶುಕ್ರವಾರ, 20 ಜನವರಿ 2023 (10:48 IST)
ಭೋಪಾಲ್ : ರಾಜಸ್ಥಾನ ಮೂಲದ ವ್ಯಕ್ತಿಯೊಬ್ಬ (32) ತನ್ನ ನಾಲ್ಕನೇ ಪತ್ನಿಗೆ ತ್ರಿವಳಿ ತಲಾಖ್ ನೀಡಿದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ ಎಂದು ಮಧ್ಯಪ್ರದೇಶ ಇಂದೋರ್ ನಗರ ಪೊಲೀಸರು ತಿಳಿಸಿದ್ದಾರೆ.

ಮುಸ್ಲಿಂ ಮಹಿಳೆಯರ (ವಿವಾಹದ ಹಕ್ಕುಗಳ ರಕ್ಷಣೆ) ಕಾಯಿದೆಯು ತ್ರಿವಳಿ ತಲಾಖ್ ಪದ್ಧತಿಯನ್ನು ನಿಷೇಧಿಸುತ್ತದೆ. ಇಂತಹ ಪ್ರಕರಣಗಳಲ್ಲಿ ಆರೋಪಿಗೆ 3 ವರ್ಷಗಳ ವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ. 

ಮ್ಯಾಟ್ರಿಮೋನಿ ವೆಬ್ಸೈಟ್ ಮೂಲಕ ಸಂತ್ರಸ್ತ ಮಹಿಳೆ ಹಾಗೂ ಆರೋಪಿ ಇಮ್ರಾನ್ ಸಂರ್ಪಕಕ್ಕೆ ಬಂದು ನಂತರ ಮದುವೆಯಾಗಿದ್ದರು ಎಂದು ಸ್ಥಳೀಯ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಮನೀಶಾ ಡಾಂಗಿ ಹೇಳಿದ್ದಾರೆ.
ಇಮ್ರಾನ್ಗೆ ಈಗಾಗಲೇ ಮೂವರು ಪತ್ನಿಯರಿದ್ದಾರೆ ಎಂಬುದು ನಾಲ್ಕನೇ ಪತ್ನಿಗೆ ಗೊತ್ತಾಗಿದೆ. ರಾಜಸ್ಥಾನದಲ್ಲಿ ನೆಲೆಸಿರುವ ಇಮ್ರಾನ್, ನಾಲ್ಕನೇ ಪತ್ನಿಗೆ “ತಲಾಖ್, ತಲಾಖ್, ತಲಾಖ್” ಎಂದು ಸಂದೇಶ ಕಳುಹಿಸುವ ಮೂಲಕ ಸಂಬಂಧವನ್ನು ಕೊನೆಗೊಳಿಸಲು ತಿಳಿಸಿದ್ದ. 

ಈ ಸಂಬಂಧ ಮಹಿಳೆಯ ದೂರಿನ ಮೇರೆಗೆ ಸ್ಥಳೀಯ ಪೊಲೀಸರು ಸೋಮವಾರ ಇಮ್ರಾನ್ ವಿರುದ್ಧ ಮುಸ್ಲಿಂ ಮಹಿಳೆಯರ (ವಿವಾಹ ಹಕ್ಕುಗಳ ರಕ್ಷಣೆ) ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಇದು ಕುಸ್ತಿಪಟುಗಳ ಹೋರಾಟ.. ರಾಜಕೀಯ ಮಾಡ್ಬೇಡಿ : ಬೃಂದಾ ಕಾರಟ್