Select Your Language

Notifications

webdunia
webdunia
webdunia
webdunia

ಬೋರ್ವೆಲ್ಗೆ ಬಿದ್ದು 8ರ ಬಾಲಕ ಸಾವು

ಬೋರ್ವೆಲ್ಗೆ ಬಿದ್ದು 8ರ ಬಾಲಕ ಸಾವು
ಭೋಪಾಲ್ , ಶನಿವಾರ, 10 ಡಿಸೆಂಬರ್ 2022 (09:06 IST)
ಭೋಪಾಲ್ : ಬೋರ್ವೆಲ್ಗೆ ಬಿದ್ದ 8 ವರ್ಷದ ಬಾಲಕ 65 ಗಂಟೆಗಳ ರಕ್ಷಣಾ ಕಾರ್ಯಾಚರಣೆಯ ನಂತರ ಹೊರತೆಗೆದರೂ ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದ ಬೇತುಲ್ನಲ್ಲಿ ನಡೆದಿದೆ.
 
ತನ್ಮಯ್ ಸಾಹು (8) ಮೃತ ಬಾಲಕ. ಡಿಸೆಂಬರ್ 6 ರಂದು ಜಮೀನಿನಲ್ಲಿ ಆಟವಾಡುತ್ತಿದ್ದ. ಈ ವೇಳೆ ಜಮೀನಿನಲ್ಲಿ ಇದ್ದ 55 ಅಡಿ ಆಳದ ಬೋರ್ವೆಲ್ಗೆ ತನ್ಮಯ್ ಬಿದ್ದಿದ್ದ.

ಇದನ್ನು ನೋಡಿದ ಪೋಷಕರು ತಕ್ಷಣ ಪೊಲೀಸರಿಗೆ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ತನ್ಮಯ್ ಬಿದ್ದು ಒಂದು ಗಂಟೆಯಲ್ಲೇ ಸಿಬ್ಬಂದಿಯನ್ನು ಕರೆಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. 

ತನ್ಮಯ್ ಸಾಹುನನ್ನು ಸತತ 65 ಗಂಟೆಗಳ ಕಾಲ ರಕ್ಷಣಾ ಕಾರ್ಯಾಚರಣೆಯನ್ನು ಮಾಡಿ ಹೊರತೆಗೆದಿದ್ದರು. ಆದರೆ ಆತನನ್ನು ಬೇತುಲ್ ಜಿಲ್ಲಾ ಆಸ್ಪತ್ರೆಗೆ ಕೊಂಡೊಯ್ಯಲಾಗುತ್ತಿದೆ. ಆದರೆ ಅಲ್ಲಿ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಚಂಡಮಾರುತ : ಹಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್