Select Your Language

Notifications

webdunia
webdunia
webdunia
webdunia

ವಾರಸುದಾರರಿಲ್ಲದ RBIಗೆ ಹಣ ವರ್ಗಾವಣೆ

ವಾರಸುದಾರರಿಲ್ಲದ RBIಗೆ ಹಣ ವರ್ಗಾವಣೆ
ನವದೆಹಲಿ , ಮಂಗಳವಾರ, 4 ಏಪ್ರಿಲ್ 2023 (08:56 IST)
ನವದೆಹಲಿ : ವಾರಸುದಾರರಿಲ್ಲದ ಸುಮಾರು 35,000 ಕೋಟಿಗಳಷ್ಟು ಠೇವಣಿಗಳನ್ನು ಸಾರ್ವಜನಿಕ ವಲಯದ ಬ್ಯಾಂಕ್ಗಳು ರಿಸರ್ವ್ ಬ್ಯಾಂಕ್ಗೆ ವರ್ಗಾಯಿಸಿದೆ ಎಂದು ಸಂಸತ್ತಿಗೆ ತಿಳಿಸಿದೆ.
 
ಈ ಬಗ್ಗೆ ಲೋಕಸಭೆಯಲ್ಲಿ ಹಣಕಾಸು ರಾಜ್ಯ ಸಚಿವ ಭಾಗವತ್ ಕರದ್ ಲಿಖಿತ ರೂಪದಲ್ಲಿ ತಿಳಿಸಿದ್ದಾರೆ. 10 ವರ್ಷ ಅಥವಾ ಅದಕ್ಕಿಂತ ಹೆಚ್ಚು ವರ್ಷಗಳ ಕಾಲ ಕಾರ್ಯನಿರ್ವಹಿಸದ ಠೇವಣಿಗಳನ್ನು 2023ರ ಫೆ. ಅಂತ್ಯದ ವೇಳೆಗೆ 10.24 ಕೋಟಿ ಖಾತೆಗಳಿಂದ RBIಗೆ 35,012 ಕೋಟಿ ರೂ. ಹಣ ವರ್ಗಾಯಿಸಲಾಗಿದೆ.

ಎಸ್ಬಿಐ ಅಗ್ರಸ್ಥಾನದಲ್ಲಿದ್ದು, 8,086 ಕೋಟಿ ವಾರಸುದಾರರಿಲ್ಲದ ಠೇವಣಿಗಳನ್ನು ಹೊಂದಿದೆ. 5,340 ಕೋಟಿ ಕ್ಲೈಮ್ ಮಾಡದ ಠೇವಣಿಗಳೊಂದಿಗೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ನಂತರ ಸ್ಥಾನದಲ್ಲಿದೆ. ಇದರ ನಂತರ ಕೆನರಾ ಬ್ಯಾಂಕ್ 4,558 ಕೋಟಿ ರೂ. ಹಾಗೂ ಬ್ಯಾಂಕ್ ಆಫ್ ಬರೋಡಾ 3,904 ಕೋಟಿ ಕ್ಲೈಮ್ ಮಾಡದ ಠೇವಣಿಯನ್ನು ಹೊಂದಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ ಇನ್ನೂ ಎರಡು ದಿನ ಮಳೆ