Select Your Language

Notifications

webdunia
webdunia
webdunia
webdunia

ದುರಂತ : ಮಕ್ಕಳು ಸೇರಿ ಸಾಕಷ್ಟು ಮಂದಿ ದುರ್ಮರಣ!

ದುರಂತ : ಮಕ್ಕಳು ಸೇರಿ ಸಾಕಷ್ಟು ಮಂದಿ ದುರ್ಮರಣ!
ಟ್ರಿಪೋಲಿ , ಬುಧವಾರ, 6 ಜುಲೈ 2022 (13:16 IST)
ಟ್ರಿಪೋಲಿ : ಲಿಬಿಯಾ ಕರಾವಳಿಯಲ್ಲಿ ನಡೆದ ದೋಣಿ ದುರಂತದಲ್ಲಿ ಮೂವರು ಮಕ್ಕಳು ಸೇರಿದಂತೆ 22 ಜನರು ಸಾವನ್ನಪ್ಪಿದ ಘಟನೆ ನಡೆದಿದೆ.

ಜೂನ್ 22ರಂದು 83 ವಲಸಿಗರು ಲಿಬಿಯಾದ ಝುವರಾ ನಗರದಿಂದ ರಬ್ಬರ್ ಬೋಟ್ನಲ್ಲಿ ಪ್ರಯಾಣ ಬೆಳೆಸಿದ್ದರು. ಈ ವೇಳೆ ದೋಣಿ ದುರಂತ ಉಂಟಾಗಿದೆ.

ಘಟನೆ ನಡೆದ 9 ದಿನಗಳ ಬಳಿಕ 61 ಜನರನ್ನು ಲಿಬಿಯಾ ಕರಾವಳಿ ಪಡೆ ರಕ್ಷಿಸಿದೆ. ಇದರಲ್ಲಿ ಹೆಚ್ಚಿನವರು ಮಾಲಿಯನ್ ಪ್ರಜೆಗಳಾಗಿದ್ದರು ಎಂದು ವಿಶ್ವಸಂಸ್ಥೆಯ ವಲಸಿಗರ ಅಂತಾರಾಷ್ಟ್ರೀಯ ಸಂಸ್ಥೆ ತಿಳಿಸಿದೆ. 

ನೀರಿನಲ್ಲಿ ಮುಳುಗಿ ಮತ್ತು ನಿರ್ಜಲೀಕರಣದಿಂದ 22 ಮಂದಿ ವಲಸಿಗರು ಮೃತಪಟ್ಟಿದ್ದಾರೆ ಎಂದು ಬದಕುಳಿದವರು ತಿಳಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಅತಿಥಿ ಉಪನ್ಯಾಸಕರಿಗೆ ಗೌರವಧನ ಹೆಚ್ಚಳ !