Select Your Language

Notifications

webdunia
webdunia
webdunia
webdunia

ಇಂದು ಸುಪ್ರೀಂಕೋರ್ಟ್ ಸ್ವಯಂಪ್ರೇರಿತ ವಿಚಾರಣೆ

ಇಂದು ಸುಪ್ರೀಂಕೋರ್ಟ್ ಸ್ವಯಂಪ್ರೇರಿತ ವಿಚಾರಣೆ
ಹೊಸದಿಲ್ಲಿ , ಗುರುವಾರ, 7 ಅಕ್ಟೋಬರ್ 2021 (12:17 IST)
ಹೊಸದಿಲ್ಲಿ : ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಪ್ರತಿಭಟನಾಕಾರ ರೈತರ ಮೇಲೆ ಎಸ್ಯುವಿ ಹರಿದ ಸಂಬಂಧ ಭುಗಿಲೆದ್ದ ಹಿಂಸಾಚಾರದಲ್ಲಿ 8 ಮಂದಿ ಮೃತಪಟ್ಟ ಘಟನೆಯನ್ನು ಸುಪ್ರೀಂಕೋರ್ಟ್ ಸ್ವಯಂಪ್ರೇರಿತವಾಗಿ ವಿಚಾರಣೆಗೆ ಕೈಗೆತ್ತಿಕೊಂಡಿದ್ದು, ಗುರುವಾರ ವಿಚಾರಣೆ ನಡೆಯಲಿದೆ.

ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಮತ್ತು ನ್ಯಾಯಮೂರ್ತಿಗಳಾದ ಸೂರ್ಯಕಾಂತ ಹಾಗೂ ಹಿಮಾ ಕೊಹ್ಲಿ ಅವರನ್ನು ಒಳಗೊಂಡ ನ್ಯಾಯಪೀಠ ಸ್ವಯಂಪ್ರೇರಿತವಾಗಿ ಗಣನೆಗೆ ತೆಗೆದುಕೊಂಡ ಈ ಪ್ರಕರಣದ ವಿಚಾರಣೆ ನಡೆಸಯಲಿದೆ. ಜೀವಹಾನಿಗೆ ಕಾರಣವಾದ ಘಟನೆಯಲ್ಲಿ ಸಂಬಂಧಪಟ್ಟವರನ್ನು ಇದುವರೆಗೆ ಬಂಧಿಸದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಸರ್ಕಾರದಿಂದ ಉತ್ತರ ಕೇಳಿ ನೋಟಿಸ್ ನೀಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಅಕ್ಟೋಬರ್ 3ರಂದು ನಡೆದ ಘಟನೆಯಲ್ಲಿ ಗೃಹಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಥೇಣಿಯವರಿಗೆ ಸೇರಿದ್ದು ಎನ್ನಲಾದ ಮತ್ತು ಅವರ ಪುತ್ರ ಆಶೀಶ್ ಚಲಾಯಿಸುತ್ತಿದ್ದ ಎನ್ನಲಾದ ವಾಹನ ಪ್ರತಿಭಟನಾಕಾರ ರೈತರ ಮೇಲೆ ಹರಿದು ನಾಲ್ವರು ರೈತರು ಮೃತಪಟ್ಟಿದ್ದರು. ಆಗ ಉದ್ರಿಕ್ತಗೊಂಡ ರೈತರ ಗುಂಪು ವಾಹನದಲ್ಲಿ ಇದ್ದ ಮೂವರನ್ನು ಕೊಂದು ಹಾಕಿತ್ತು. ಈ ಘಟನೆಯನ್ನು ವರದಿ ಮಾಡಲು ಆಗಮಿಸಿದ್ದ ಒಬ್ಬ ಪತ್ರಕರ್ತ ಕೂಡಾ ಘಟನೆಯಲ್ಲಿ ಮೃತಪಟ್ಟಿದ್ದರು. ವಾಹನದಲ್ಲಿ ತಮ್ಮ ಮಗ ಇದ್ದ ಎನ್ನುವುದನ್ನು ನಿರಾಕರಿಸಿದ ಸಚಿವರು, ವಾಹನದ ಮೇಲೆ ಪ್ರತಿಭಟನಾಕಾರರು ದಾಳಿ ನಡೆಸಿದಾಗ ಚಾಲಕ ನಿಯಂತ್ರಣ ಕಳೆದುಕೊಂಡ ಎಂದು ಹೇಳಿದ್ದರು.
ಇಬ್ಬರು ಸುಪ್ರೀಂಕೋರ್ಟ್ ವಕೀಲರು ಸಿಜೆಐಯವರಿಗೆ ಪತ್ರ ಬರೆದು, ಉತ್ತರ ಪ್ರದೇಶ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ ಈ ಘಟನೆ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದರು


Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಬಿಜೆಪಿಯಿಂದ ರಾಷ್ಟ್ರಾದ್ಯಂತ ಸೇವಾ ಕಾರ್ಯ