Select Your Language

Notifications

webdunia
webdunia
webdunia
webdunia

ತಿರುಪತಿ ಗರ್ಭಗುಡಿ 8 ತಿಂಗಳು ಬಂದ್ ಇಲ್ಲ !

ತಿರುಪತಿ ಗರ್ಭಗುಡಿ 8 ತಿಂಗಳು ಬಂದ್ ಇಲ್ಲ !
ಅಮರಾವತಿ , ಶನಿವಾರ, 31 ಡಿಸೆಂಬರ್ 2022 (09:47 IST)
ಅಮರಾವತಿ : ಚಿನ್ನಲೇಪನದ ವೇಳೆ ತಿರುಪತಿ ತಿರುಮಲ ದೇವಸ್ಥಾನದ ಗರ್ಭಗುಡಿಯನ್ನು 6-8 ತಿಂಗಳು ಮುಚ್ಚುವ ಸಾಧ್ಯತೆಯಿದೆ ಎಂದು ಹೇಳಲಾಗಿತ್ತು. ಆದ್ರೆ ಈ ಬಗ್ಗೆ ದೇಗುಲದ ಮುಖ್ಯ ಅರ್ಚಕರಲ್ಲಿ ಒಬ್ಬರಾದ ವೇಣುಗೋಪಾಲ ದೀಕ್ಷಿತುಲು ಅವರು ಸ್ಪಷ್ಟನೆ ನೀಡಿದ್ದಾರೆ.

ಗರ್ಭಗುಡಿ ಗೋಪುರಕ್ಕೆ ಚಿನ್ನದ ಲೇಪನ ಕಾರ್ಯ ನಡೆದರೂ ತಿಮ್ಮಪ್ಪನ ಮೂಲ ವಿರಾಟ ಮೂರ್ತಿಯ ದರ್ಶನ ಎಂದಿನಂತೆ ನಡೆಯಲಿದೆ ಎಂದು ತಿಳಿಸಿದ್ದಾರೆ. 

ಮಾರ್ಚ್ 1 ರಿಂದ ಚಿನ್ನದ ಲೇಪನ ಕಾರ್ಯ ಆರಂಭವಾಗಲಿದೆ. ಚಿನ್ನ ಲೇಪನಕ್ಕೆ 6 ತಿಂಗಳು ಸಮಯ ಬೇಕಾಗಲಿದೆ. ಇದಕ್ಕೂ 1 ವಾರ ಮುನ್ನ ದೇಗುಲದ ಪಕ್ಕದಲ್ಲೇ (ತಾತ್ಕಾಲಿಕ ಮಂದಿರ) ನಿರ್ಮಿಸಿ ಅಲ್ಲಿ ವೆಂಕಟೇಶ್ವರನ ಪ್ರತಿಕೃತಿ ಇರಿಸಲಾಗುತ್ತದೆ.

ಈ 6 ತಿಂಗಳೂ ಮೂಲ ಮೂರ್ತಿಯ ದರ್ಶನ ಭಕ್ತರಿಗೆ ಲಭ್ಯವಿರುತ್ತದೆ. ಆದರೆ ಸುಪ್ರಭಾತದಿಂದ ಏಕಾಂತ ಸೇವೆವರೆಗಿನ ಸೇವೆಗಳನ್ನು ಏಕನಾಥಂನಲ್ಲಿ ಮಾಡಲಾಗುತ್ತದೆ ಎಂದಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ವರ್ಷಕ್ಕೆ ಮೈಸೂರು ಚಾಮುಂಡಿಬೆಟ್ಟಕ್ಕೆ ಪ್ರವೇಶ ನಿರ್ಬಂಧ!