ತಿರುಪತಿ: ವೈಕುಂಠ ದ್ವಾರದ ಟಿಕೆಟ್ ಪಡೆಯಲು ನೂಕುನುಗ್ಗಲು ಉಂಟಾಗಿದ್ದರಿಂದ 6 ಮಂದಿ ಸಾವನ್ನಪ್ಪಿದ್ದು 20 ಮಂದಿ ಗಾಯಗೊಂಡಿದ್ದಾರೆ. ಈ ದುರಂತಕ್ಕೆ ತಿಮ್ಮಪ್ಪನ ಶಾಪವೇ ಕಾರಣವೇ? ಹೀಗೊಂದು ಅನುಮಾನ ಸಾರ್ವಜನಿಕರಲ್ಲಿದೆ.
ವೈಕುಂಠ ದ್ವಾರದ ಟಿಕೆಟ್ ಖರೀದಿಗೆ ಜನ ಒಟ್ಟಿಗೇ ನುಗ್ಗದ್ದರಿಂದ ಕಾಲ್ತುಳಿತ ಸಂಭವಿಸಿದ್ದು 6 ಮಂದಿ ಸಾವನ್ನಪ್ಪಿದ್ದಾರೆ. 20 ಮಂದಿ ಗಾಯಗೊಂಡಿದ್ದಾರೆ. ಈ ಘಟನೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹಲವು ಅಭಿಪ್ರಾಯಗಳು ಹರಿದಾಡುತ್ತಿವೆ. ಘಟನೆಗೆ ಕಾರಣವೇನೆಂದು ವಿಶ್ಲೇಷಣೆ ನಡೆಯುತ್ತಿದೆ.
ಈ ನಡುವೆ ಕೆಲವರು ಇದು ತಿಮ್ಮಪ್ಪನ ಶಾಪ ಎನ್ನುತ್ತಿದ್ದಾರೆ. ಮೋಕ್ಷ ಸಿಗಲಿ ಎನ್ನುವ ಉದ್ದೇಶಕ್ಕೇ ವೈಕುಂಠ ದ್ವಾರದ ದರ್ಶನ ಪಡೆಯುತ್ತಾರೆ. ವಿಪರ್ಯಾಸವೆಂದರೆ ಈ ದ್ವಾರ ದರ್ಶನಕ್ಕೆ ಟಿಕೆಟ್ ಖರೀದಿ ಮಾಡುವ ಹೊತ್ತಿನಲ್ಲೇ ಈ 6 ಮಂದಿ ಸಾವನ್ನಪ್ಪಿದ್ದಾರೆ.
ಇದೆಲ್ಲಾ ತಿಮ್ಮಪ್ಪನ ಕೋಪ ಎಂದು ಜನರು ಸೋಷಿಯಲ್ ಮೀಡಿಯಾದಲ್ಲಿ ಹೇಳುತ್ತಿದ್ದಾರೆ. ಜಗನ್ ರೆಡ್ಡಿ ಸಿಎಂ ಆಗಿದ್ದಾಗ ತಿರುಪತಿ ತಿಮ್ಮಪ್ಪನ ಪ್ರಸಾದ ರೂಪದಲ್ಲಿ ನೀಡುತ್ತಿದ್ದ ಲಡ್ಡುಗೆ ಪ್ರಾಣಿಗಳ ಕೊಬ್ಬು ಬೆರೆಸಲಾಗಿತ್ತು ಎಂಬ ಅಂಶ ಬೆಳಕಿಗೆ ಬಂದಿತ್ತು. ತಿರುಪತಿ ತಿಮ್ಮಪ್ಪನ ಸನ್ನಿಧಾನದಲ್ಲಿ ಇಂತಹ ಅನೇಕ ಅವ್ಯವಹಾರಗಳು ನಡೆಯುತ್ತಿತ್ತು. ಈ ವಿಚಾರಗಳು ರಾಜಕೀಯವಾಗಿ ಸಾಕಷ್ಟು ಸದ್ದು ಮಾಡಿತ್ತು. ತಿಮ್ಮಪ್ಪನಿಗೆ ಮಾಡಿದ ಈ ಅಪಚಾರಗಳೇ ನಿನ್ನೆ ನಡೆದ ದುರಂತಕ್ಕೆ ಒಂದು ಕಾರಣ ಎಂದು ಸಾರ್ವಜನಿಕರು ಅಭಿಪ್ರಾಯಪಡುತ್ತಿದ್ದಾರೆ.