Publish Date: Sat, 30 Apr 2016 (09:33 IST)
Updated Date: Sat, 30 Apr 2016 (10:19 IST)
ಬೇಸಿಲ ಬೇಗೆಯಿಂದ ಹೈರಾಣಾಗಿದ್ದ ರಾಜ್ಯದ ಕೆಲ ಭಾಗಗಳಲ್ಲಿ ಶುಕ್ರವಾರ ಗುಡುಗು ಸಹಿತ ಭಾರಿ ಮಳೆಯಾಗಿದ್ದು, ಸಿಡಿಲು ಬಡಿದು ಪ್ರತ್ಯೇಕ ಸ್ಥಳಗಳಲ್ಲಿ ಒಟ್ಟು 5 ಜನರು ದುರ್ಮರವನ್ನಪ್ಪಿದ್ದಾರೆ. ಅಥಣಿ ತಾಲೂಕು ಸವಧಿ ಗ್ರಾಮದಲ್ಲಿ ಶುಕ್ರವಾರ ಸುರಿದ ಆಲಿಕಲ್ಲು ಸಹಿತ ಭಾರಿ ಮಳೆಯಲ್ಲಿ ಸಿಡಿಲು ಬಡಿದು ಆದೇಶ ಅಲಗೂರೆ(45), ಪತ್ನಿ ಅನಂತಮತಿ ಅಲಗೂರೆ (38) ಹಾಗೂ ಮಗ ದರ್ಶನ ಅಲಗೂರೆ (16) ಮೃತಪಟ್ಟವರಾಗಿದ್ದಾರೆ. ಇವರು ಬಾಗಲಕೋಟೆ ಜಿಲ್ಲೆಯ ಜಮಖಂಡಿ ಮೂಲದವರಾಗಿದ್ದಾರೆ.
ದಂಪತಿ ಮಗನ ಜತೆ ಹೊಲದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ವೇಳೆ ಘಟನೆ ನಡೆದಿದೆ.
ಘಟನಾ ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿಜಯಪುರ ತಾಲೂಕಿನ ಅತಾಲಟ್ಟಿ ಗ್ರಾಮದಲ್ಲಿ ಸಿದ್ದು ಕರಡೆ (55), ಬಾಗಲಕೋಟೆ ಜಮಖಂಡಿ ತಾಲೂಕಿನ ಕಲ್ಲಳ್ಳಿಯ ರೈತ ರಾವಸಾಬ ಸಿದ್ದಪ್ಪ ಬನಜನವರ(32) ಕೂಡ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ.