Select Your Language

Notifications

webdunia
webdunia
webdunia
webdunia

ಮೂವರು ಸರ್ಕಾರೀ ಶಿಕ್ಷಕರಿಂದ ವಿದ್ಯಾರ್ಥಿನಿಯ ಮೇಲೆಯೇ ಗ್ಯಾಂಗ್ ರೇಪ್: ಘಟನೆ ಹೊರಬಂದಿದ್ದೇ ರೋಚಕ

Crime

Krishnaveni K

ಕೃಷ್ಣಗಿರಿ , ಗುರುವಾರ, 6 ಫೆಬ್ರವರಿ 2025 (12:10 IST)
ಕೃಷ್ಣಗಿರಿ: ತಮಿಳುನಾಡಿನ ಕೃಷ್ಣಗಿರಿಯಲ್ಲಿ ಮೂವರು ಸರ್ಕಾರೀ ಶಿಕ್ಷಕರು ಸೇರಿಕೊಂಡು 13 ವರ್ಷದ ವಿದ್ಯಾರ್ಥಿನಿಯ ಮೇಲೆ ಗ್ಯಾಂಗ್ ರೇಪ್ ಎಸಗಿದ ಹೇಯ ಕೃತ್ಯ ನಡೆದಿದೆ. ಘಟನೆ ಬೆಳಕಿಗೆ ಬಂದಿದ್ದೇ ರೋಚಕವಾಗಿದೆ.

13 ವರ್ಷದ ವಿದ್ಯಾರ್ಥನಿ ಕೆಲವು ದಿನಗಳಿಂದ ಶಾಲೆಗೆ ಬರುತ್ತಿರಲಿಲ್ಲ. ಹೀಗಾಗಿ ಸ್ವತಃ ಮುಖ್ಯ ಶಿಕ್ಷಕರು ಮನೆಗೆ ತೆರಳಿ ಬಾಲಕಿ ಶಾಲೆಗೆ ಯಾಕೆ ಬರುತ್ತಿಲ್ಲ ಎಂದು ವಿಚಾರಿಸಿದ್ದರು. ಈ ವೇಳೆ ಪೋಷಕರು ಮತ್ತು ವಿದ್ಯಾರ್ಥಿನಿ ತನ್ನ ಮೇಲಾದ ದೌರ್ಜನ್ಯವನ್ನು ವಿವರಿಸಿದ್ದಳು.

ಮೂವರು ಶಿಕ್ಷಕರ ಪೈಕಿ ಮೊದಲು ಓರ್ವ ಶಿಕ್ಷಕ ವಿದ್ಯಾರ್ಥಿನಿಯ ಮೇಲೆರಗಿದ್ದ. ಈ ಘಟನೆ ಬಗ್ಗೆ ಬಾಲಕಿ ಉಳಿದ ಇಬ್ಬರು ಶಿಕ್ಷಕರ ಬಳಿ ಹೇಳಿದಾಗ ಅವರೂ ಸೇರಿಕೊಂಡು ಅತ್ಯಾಚಾರವೆಸಗಿದ್ದಾರೆ ಎಂದು ತಿಳಿದುಬಂದಿದೆ.

ಘಟನೆ ಬಗ್ಗೆ ತಿಳಿಯುತ್ತಿದ್ದಂತೇ ಮುಖ್ಯ ಶಿಕ್ಷಕರು ಕೂಡಲೇ ಪೊಲೀಸರಿಗೆ ದೂರು ನೀಡಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿದ್ದಾರೆ. ಇದೀಗ ಮೂವರು ಆರೋಪಿ ಶಿಕ್ಷಕರನ್ನು ಪೋಸ್ಕೋ ಖಾಯಿದೆಯಡಿ ಬಂಧಿಸಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡ ಬರೆಯಲು ಬರಲ್ಲ ಎಂದು ಟ್ರೋಲ್ ಮಾಡಿದವರಿಗೇ ಸಚಿವ ಶಿವರಾಜ್ ತಂಗಡಗಿ ತರಾಟೆ