Select Your Language

Notifications

webdunia
webdunia
webdunia
webdunia

ಇದು ಕಾಂಗ್ರೆಸ್ ಅಲ್ಲ, ಮೋದಿ ಸರ್ಕಾರ, ಜನತೆಗಾಗಿ ದುಡಿಯಿರಿ: ಮೋದಿ ತಾಕೀತು

ಇದು ಕಾಂಗ್ರೆಸ್ ಅಲ್ಲ, ಮೋದಿ ಸರ್ಕಾರ, ಜನತೆಗಾಗಿ ದುಡಿಯಿರಿ: ಮೋದಿ ತಾಕೀತು
ಸಿಲ್ವಾಸಾ , ಸೋಮವಾರ, 17 ಏಪ್ರಿಲ್ 2017 (19:43 IST)
ಕೇಂದ್ರದಲ್ಲಿರುವುದು ಕಾಂಗ್ರೆಸ್ ಸರಕಾರವಲ್ಲ. ಮೋದಿ ಸರಕಾರವಾಗಿದ್ದರಿಂದ ಜನತೆಯ ಸೇವೆಗಾಗಿ ಸದಾ ಸಿದ್ದರಾಗಿರಬೇಕು ಎಂದು ಅಧಿಕಾರಿಗಳಿಗೆ ಪ್ರಧಾನಿ ನರೇಂದ್ರ ಮೋದಿ ತಾಕೀತು ಮಾಡಿದ್ದಾರೆ.
ಭಾರತ ದೇಶ ಪ್ರತಿಯೊಬ್ಬ ಭಾರತೀಯನಿಗೆ ಸೇರಿದ್ದಾಗಿದೆ. ಆದ್ದರಿಂದ, ಯಾವುದೇ ಸಮುದಾಯಗಳ ನಡುವೆ ತಾರತಮ್ಯ ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಹೇಳಿದ್ದಾರೆ.  
 
ದಾದ್ರಾ ಮತ್ತು ನಗರ್‌ಹವೇಲಿ ನಗರದಲ್ಲಿ ಆಯೋಜಿಸಲಾದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಹಲವು ವರ್ಷಗಳ ಹಿಂದೆ ಪ್ರಧಾನಿಯೊಬ್ಬರು ಇಲ್ಲಿಗೆ ಆಗಮಿಸಿದ ನಂತರ ಪ್ರಧಾನಿಯಾಗಿ ಮೊದಲ ಬಾರಿಗೆ ನಾನು ಇಲ್ಲಿಗೆ ಬಂದಿದ್ದೇನೆ. ಹಿಂದೆ ಕೂಡಾ ಹಲವಾರು ಬಾರಿ ನಾನು ಇಲ್ಲಿಗೆ ಬಂದಿದ್ದೇನೆ. ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಕೂಡಲೇ ಇಲ್ಲಿನ ಮೂಲಸೌಕರ್ಯ, ಅಭಿವೃದ್ಧಿ ಕಾರ್ಯಗಳ ಬಗ್ಗೆ ವಿವರಣೆ ಪಡೆದಿದ್ದೇನೆ ಎಂದರು.  
 
ದೇಶದ ಪ್ರತಿಯೊಬ್ಬ ಭಾರತೀಯನಿಗೆ ವಾಸಿಸಲು ಸೂರು ಇರುವುದು ಅಗತ್ಯ. ಹಿಂದೆ ಗ್ಯಾಸ್ ಸಂಪರ್ಕ ಪಡೆಯುವುದು ತುಂಬಾ ಕಷ್ಟವಾಗಿತ್ತು. ಅಡುಗೆ ಅನಿಲ ಸಂಪರ್ಕ ಪಡೆಯಲು ಸ್ಥಳೀಯ ಸಂಸದನನ್ನು ಸಂಪರ್ಕಿಸಿ ದೀರ್ಘಾವಧಿಯವರೆಗೆ ನಿರೀಕ್ಷಿಸಬೇಕಾಗಿತ್ತು. ಆದರೆ, ನಮ್ಮ ಸರಕಾರ ಬಂದ ಒಂದೇ ವರ್ಷದಲ್ಲಿ ಎರಡು ಕೋಟಿ ಜನರಿಗೆ ಗ್ಯಾಸ್ ಸಂಪರ್ಕ ನೀಡಿದ್ದೇವೆ ಎಂದರು.
 
ಬಡವರು ಮತ್ತು ಮಧ್ಯಮ ವರ್ಗದವರನ್ನು ಲೂಟಿ ಮಾಡಲು ನಮ್ಮ ಸರಕಾರ ಬಿಡುವುದಿಲ್ಲ. ನಿಮ್ಮ ಮೊಬೈಲ್‌ ಫೋನ್‌ನ್ನು ಬ್ಯಾಂಕ್ ಆಗಿಸಿ. ಪ್ರತಿಯೊಬ್ಬರು ಭೀಮ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.
 
ದೇಶದ ಪ್ರತಿಯೊಬ್ಬ ನಾಗರಿಕರು ಕಠಿಣ ಪರಿಶ್ರಮದಿಂದ ದುಡಿದು ದೇಶಕ್ಕಾಗಿ ಸೇವೆ ಸಲ್ಲಿಸಬೇಕು. ಜನತೆಯ ಸಹಕಾರವಿಲ್ಲದೇ ಸರಕಾರ ಭಾರತವನ್ನು ಮುನ್ಡಡೆಸಲು ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ವಿಧಾನಪರಿಷತ್ ಸದಸ್ಯೆ ವಿಮಲಾ ಗೌಡ ವಿಧಿವಶ