Select Your Language

Notifications

webdunia
webdunia
webdunia
webdunia

ವಿಧಾನಪರಿಷತ್ ಸದಸ್ಯೆ ವಿಮಲಾ ಗೌಡ ವಿಧಿವಶ

ವಿಧಾನಪರಿಷತ್ ಸದಸ್ಯೆ ವಿಮಲಾ ಗೌಡ ವಿಧಿವಶ
ಬೆಂಗಳೂರು , ಸೋಮವಾರ, 17 ಏಪ್ರಿಲ್ 2017 (19:19 IST)
ಮಾಜಿ ಉಪಸಭಾಪತಿ, ಬಿಜೆಪಿಯ ವಿಧಾನಪರಿಷತ್ ಸದಸ್ಯೆ 63 ವರ್ಷದ ವಿಮಲಾ ಗೌಡ ವಿಧಿವಶರಾಗಿದ್ದಾರೆ. ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ವಿಮಲಾಗೌಡ ಕೊನೆಯುಸಿರೆಳೆದಿದ್ದಾರೆ.

 ಕಳೆದ ಕೆಲ ದಿನಗಳಿಂದ ಹೃದ್ರೋಗದಿಂದ ಬಳಲುತ್ತಿದ್ದ ವಿಮಾಲಗೌಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ. ಪತಿ ಮತ್ತು ಇಬ್ಬರು ಮಕ್ಕಳನ್ನ ವಿಮಲಾಗೌಡ ಅಗಲಿದ್ದಾರೆ.

ನಾಗಮಂಗಲ ಮೂಲದವರಾದ ವಿಮಲಾಗೌಡ 1980ರಲ್ಲಿ ಬಿಜೆಪಿ ಸೇರ್ಪಡೆಗೊಂಡಿದ್ದರು. ವಿಮಲಾಗೌಡ ನಿಧನಕ್ಕೆ ಗಣ್ಯರು ಕಂಬನಿ ಮಿಡಿದಿದ್ದಾರೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದಗಂಗಾ ಶ್ರೀಗಳಿಗೆ ಮಹಾವೀರ ಪ್ರಶಸ್ತಿ