Select Your Language

Notifications

webdunia
webdunia
webdunia
webdunia

ಲಿಪ್ಟ್ ಕೊಡುವ ನೆಪದಲ್ಲಿ ಶಿಕ್ಷಕ ವಿದ್ಯಾರ್ಥಿನಿಯ ಮೇಲೆ ಎಸಗಿದ್ದಾನೆ ಇಂತಹ ನೀಚ ಕೃತ್ಯ

ಲಿಪ್ಟ್ ಕೊಡುವ ನೆಪದಲ್ಲಿ ಶಿಕ್ಷಕ  ವಿದ್ಯಾರ್ಥಿನಿಯ ಮೇಲೆ ಎಸಗಿದ್ದಾನೆ ಇಂತಹ ನೀಚ ಕೃತ್ಯ
ವಿಶಾಖಪಟ್ಟಣಂ , ಗುರುವಾರ, 28 ಫೆಬ್ರವರಿ 2019 (08:15 IST)
ವಿಶಾಖಪಟ್ಟಣಂ : ಸರ್ಕಾರಿ ಶಾಲೆಯ ಶಿಕ್ಷಕನೊಬ್ಬ 9ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳಿಗೆ ಲಿಪ್ಟ್ ಕೊಡುವ ನೆಪದಲ್ಲಿ         ಅತ್ಯಾಚಾರ ಎಸಗಿದ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂ ನಲ್ಲಿ ನಡೆದಿದೆ.


ವಿದ್ಯಾರ್ಥಿನಿ ಶಾಲೆಗೆ ತೆರಳಲು ಬಸ್ಸಿಗಾಗಿ ಕಾಯುತ್ತಿದ್ದ ವೇಳೆ ಬೈಕ್ ನಲ್ಲಿ ಬಂದ ಶಿಕ್ಷಕ ಶಾಲೆಯ ಬಳಿ  ಬಿಡುವುದಾಗಿ ಹೇಳಿದ್ದಾರೆ. ಮೊದಲು ನಿರಾಕರಿಸಿದ ವಿದ್ಯಾರ್ಥಿನಿ ಬಳಿಕ ಒಪ್ಪಿಕೊಂಡು  ಶಿಕ್ಷಕನ ಜತೆ ತೆರಳಿದ್ದಾಳೆ. ಆ ವೇಳೆ ಆತ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಅಷ್ಟೇ ಅಲ್ಲದೇ ಇದಕ್ಕೆ ವಿರೋಧ ವ್ಯಕ್ತಪಡಿಸಿದ ವಿದ್ಯಾರ್ಥಿನಿಯ ಮೇಲೆ ಹಲ್ಲೆ ಕೂಡ ಮಾಡಿದ್ದಾನೆ.


ಆದರೆ ಬಾಲಕಿ ಚೀರಿಕೊಂಡಿದ್ದರಿಂದ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಆರೋಪಿ ಶಿಕ್ಷಕನನ್ನು ಬಂಧಿಸಿ, ಬಾಲಕಿಯನ್ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

Share this Story:

Follow Webdunia kannada

ಮುಂದಿನ ಸುದ್ದಿ

ಜಿಯೋನ ಈ ಆ್ಯಪ್ ಮೂಲಕ ಒಮ್ಮೆ ಒಟ್ಟಿಗೆ 10 ಮಂದಿ ಮಾತನಾಡಬಹುದಂತೆ