Select Your Language

Notifications

webdunia
webdunia
webdunia
webdunia

ಪತ್ರಕರ್ತರ ಪ್ರಶ್ನೆಗೆ ವಿಚಲಿತರಾದ ಅಖಿಲೇಶ್ ಯಾದವ್

ಪತ್ರಕರ್ತರ ಪ್ರಶ್ನೆಗೆ ವಿಚಲಿತರಾದ ಅಖಿಲೇಶ್ ಯಾದವ್
locknow , ಭಾನುವಾರ, 19 ಫೆಬ್ರವರಿ 2017 (12:53 IST)
ದೇಶಾದ್ಯಂತ ಕುತೂಹಲ ಕೆರಳಿಸಿರುವ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯ 3ನೇ ಹಂತದ ಮತದಾನ ಇಂದು ನಡೆಯುತ್ತಿದೆ.  69 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದ್ದು, ಸಿಎಂ ಅಖಿಲೇಶ್ ಯಾದವ್ ತಮ್ಮ ಹುಟ್ಟೂರು ಎಟವಾದ ಅಭಿನವ್ ವಿದ್ಯಾಲಯ ಬೂತ್`ನಲ್ಲಿ ಮತ ಚಲಾಯಿಸಿದರು.

 

ಪ್ರತಿ ಚುನಾವಣೆಯಲ್ಲಿ ತಂದೆ ಮುಲಾಯಂ ಜೊತೆ ಬರುತ್ತಿದ್ದ ಅಖಿಲೇಶ್ ಇವತ್ತು ಸೋದರ ಸಂಬಂಧಿಗಳ ಜೊತೆ ಬಂದು ಮತದಾನ ಮಾಡಿದ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಅಖಿಲೇಶ್ ಕೆಂಡಾಮಂಡಲವಾದರು. ಎಸ್`ಪಿ ಮತ್ತು ಕಾಂಗ್ರೆಸ್ ಮೈತ್ರಿಗೆ ರಾಜ್ಯದ ಜನ ಮನ್ನಣೇ ನೀಡಲಿದ್ದಾರೆ ಎಂದು ಪ್ರಶ್ನೆಗಳನ್ನ ತೇಲಿಸಿಬಿಟ್ಟರು.

ಇದೇವೇಳೆ, ನಿಮ್ಮಿಂದ ದೂರವಿರುವ ಚಿಕ್ಕಪ್ಪ ಶಿವಪಾಲ್ ಸಿಂಗ್ ಯಾದವ್ ಗೆಲುವಿಗೆ ಹಾರೈಸುತ್ತೀರಾ ಎಂಬ ಪ್ರಶ್ನೆಗೂ ಸೂಕ್ತವಾಗಿ ಉತ್ತರಿಸದ ಅಖಿಲೇಶ್, ಎಲ್ಲ ಎಸ್ಪಿ ಅಭ್ಯರ್ಥಿಗಳು ಗೆಲ್ಲಲೆಂದು ಹಾರೈಸುತ್ತೇನೆ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಹೊಸ ರೂ.2,000 ನೋಟಿಗೆ ಮತ್ತೊಂದು ಶಾಕ್!