Select Your Language

Notifications

webdunia
webdunia
webdunia
webdunia

ಹೊಸ ರೂ.2,000 ನೋಟಿಗೆ ಮತ್ತೊಂದು ಶಾಕ್!

ಹೊಸ ರೂ.2,000 ನೋಟಿಗೆ ಮತ್ತೊಂದು ಶಾಕ್!
New Delhi , ಭಾನುವಾರ, 19 ಫೆಬ್ರವರಿ 2017 (12:34 IST)
ಭ್ರಷ್ಟಾಚಾರ, ಕಪ್ಪುಹಣ, ನಕಲಿ ನೋಟುಗಳನ್ನು ನಿಯಂತ್ರಿಸಲು ಕೇಂದ್ರ ಸರಕಾರ ಅಧಿಕ ಮೌಲ್ಯದ ನೋಟುಗಳನ್ನು ನಿಷೇಧಿಸಿದ್ದು ಗೊತ್ತಿರುವ ಸಂಗತಿ. ಆದರೆ ದೇಶದ ಆರ್ಥಿಕ ವ್ಯವಸ್ಥೆಯನ್ನು ನುಚ್ಚುನೂರು ಮಾಡಲು ಪಾಕ್ ಇಂಟೆಲಿಜೆನ್ಸ್ ಸಂಸ್ಥೆ ಐಎಸ್ಐ ಹೊಸ ಸಾಹಸಕ್ಕೆ ಕೈಹಾಕಿದೆ. ಭಾರತದಲ್ಲಿ ಮತ್ತೆ ನಕಲಿ ನೋಟು ಚಲಾವಣೆಗೆ ಪ್ರಯತ್ನಿಸುತ್ತಿದೆ.
 
ಭಾರತೀಯ ರಿಸರ್ವ್ ಬ್ಯಾಂಕ್ ಹೊಸದಾಗಿ ಬಿಡುಗಡೆ ಮಾಡಿರುವ ರೂ.2,000 ನಕಲಿ ನೋಟುಗಳನ್ನು ತಯಾರಿಸುತ್ತಿದೆ. ಈ ವಿಷಯವನ್ನು ಬೇಧಿಸಿರುವ ಕೇಂದ್ರ ಗುಪ್ತಚರ ಮೂಲಗಳು ಗುಪ್ತಚರ ಇಲಾಖೆ, ರಾಷ್ಟ್ರೀಯ ತನಿಖಾ ದಳ, ಕೇಂದ್ರ ಸರಕಾರವನ್ನು ಎಚ್ಚರಿಸಿವೆ. ರೂ.2,000 ನೋಟಿನ ಮೇಲಿನ 10 ರೀತಿಯ ರಕ್ಷಣಾ ವೈಶಿಷ್ಟ್ಯಗಳನ್ನು ಯಶಸ್ವಿಯಾಗಿ ಕಾಪಿ ಮಾಡಿದೆ ಎಂದು ತಿಳಿಸಿದೆ.
 
ಐಎಸ್ಐ ಜತೆಗೆ ಅದರ ಸಹ ಕಂಪೆನಿಗಳು ನಕಲಿ ನೋಟುಗಳನ್ನು ತಯಾರಿಸುವಲ್ಲಿ ಮಗ್ನವಾಗಿವೆ. ಆದರೆ ಆರ್‌ಬಿಐ ಬಳಸು ಕಾಗದದ ಗುಣಮಟ್ಟ ಮಾತ್ರ ಅವಕ್ಕೆ ಲಭ್ಯವಾಗಿಲ್ಲ. ನೋಟು ಮುದ್ರಣಕ್ಕಾಗಿ ಆರ್‌ಬಿಐಗೆ ಕಾಗದ ಸರಬರಾಜು ಮಾಡುತ್ತಿರುವ ಕಂಪೆನಿಗಳಿಂದ ಐಎಸ್ಐಗೆ ಆ ಕಾಗದ ಸಿಗದಂತೆ ಕ್ರಮಕೈಗೊಳ್ಳಲು ಸೂಚಿಸಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಉತ್ತರ ಪ್ರದೇಶದಲ್ಲಿ ಗೆಲುವು ನಮ್ಮದೇ: ರಾಜನಾಥ್ ಸಿಂಗ್