Select Your Language

Notifications

webdunia
webdunia
webdunia
webdunia

ಉತ್ತರ ಪ್ರದೇಶದಲ್ಲಿ ಗೆಲುವು ನಮ್ಮದೇ: ರಾಜನಾಥ್ ಸಿಂಗ್

ಉತ್ತರ ಪ್ರದೇಶದಲ್ಲಿ ಗೆಲುವು ನಮ್ಮದೇ: ರಾಜನಾಥ್ ಸಿಂಗ್
New Delhi , ಭಾನುವಾರ, 19 ಫೆಬ್ರವರಿ 2017 (12:07 IST)
ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಭಾನುವಾರ ಬೆಳಗ್ಗೆ ಲಕ್ನೋದ ಮತಗಟ್ಟೆಯೊಂದರಲ್ಲಿ ತಮ್ಮ ಮತ ಚಲಾಯಿಸಿದರು. ಉತ್ತರ ಪ್ರದೇಶದಲ್ಲಿ ಬಿಜೆಪಿ ಗೆಲುವು ಸಾಧಿಸುತ್ತದೆಂದು ಅವರು ಈ ಸಂದರ್ಭದಲ್ಲಿ ಅಖಂಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 
 
ಮೂರನೇ ಹಂತದ ಚುನಾವಣೆಯಲ್ಲಿ ತಾವು ಹೆಚ್ಚು ಸ್ಥಾನ ಗೆಲ್ಲುವ ಅವಕಾಶವಿದೆ, ಉಳಿದ ಪಕ್ಷಗಳಿಗಿಂತ ಅತ್ಯಧಿಕ ಸ್ಥಾನಗಳು ತಮ್ಮ ಕೈವಶವಾಗಲಿವೆ ಎಂದಿದ್ದಾರೆ. ಉತ್ತರ ಪ್ರದೇಶದಲ್ಲಿ ಮೂರನೇ ಹಂತದ ಮತದಾನ ಚುರುಕಾಗಿ ನಡೆಯುತ್ತಿದೆ.
 
ಭಾನುವಾರ ಬೆಳಗ್ಗೆ 7 ಗಂಟೆಗೆ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಯುಪಿ ಮೂರನೇ ಹಂತದ ಮತದಾನದಲ್ಲಿ 69 ಸ್ಥಾನಗಳಲ್ಲಿ ಒಟ್ಟು 826 ಮಂದಿ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಎರಡು ಕೋಟಿ ಹದಿನಾಲ್ಕು ಲಕ್ಷ ಮಂದಿ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಒಂದು ಕೋಟಿ 31 ಲಕ್ಷ ಮಂದಿ ಪುರುಷರಾದರೆ, ಒಂದು ಕೋಟಿ 10 ಲಕ್ಷ ಮಂದಿ ಮಹಿಳಾ ಮತದಾರರಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

`2030ರ ಹೊತ್ತಿಗೆ ಭಾರತಕ್ಕೆ ಅಗತ್ಯವಿರುವ ಸಂಪೂರ್ಣ ಎನರ್ಜಿ ಚಂದ್ರನಿಂದ ಸಿಗಲಿದೆ’