ರಾಜಸ್ಥಾನ್: ಮಹಿಳೆಯ ಕಾಲಲ್ಲಿದ್ದ ಗೆಜ್ಜೆ ಕದಿಯಲು ಖದೀಮನೊಬ್ಬ ಆಕೆಯ ಕಾಲನ್ನೇ ಕತ್ತರಿಸಿದ ಘಟನೆ ರಾಜಸ್ಥಾನ್ ನಲ್ಲಿ ನಡೆದಿದೆ.
ಗದ್ದೆ ಕೆಲಸ ಮಾಡುತ್ತಿದ್ದ ಗಂಡನಿಗೆ ಊಟ ಕೊಡಲು ಹೋಗುತ್ತಿದ್ದಾಗ ಆರೋಪಿ ಮಹಿಳೆಯ ಮೇಲೆ ದಾಳಿ ಮಾಡಿದ್ದಾನೆ. ಆಕೆಯ ಕಾಲು ಕತ್ತರಿಸಿದ್ದಲ್ಲದೆ, ಕೂಗಿಕೊಂಡಿದ್ದಕ್ಕೆ ಆಕೆಯ ಕುತ್ತಿಗೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.
ಪತ್ನಿ ನಾಪತ್ತೆಯಾಗಿರುವ ಬಗ್ಗೆ ಪತಿ ಪೊಲೀಸರಿಗೆ ದೂರು ನೀಡಿದ್ದರು. ಈ ಬಗ್ಗೆ ತನಿಖೆ ನಡೆಸಿದಾಗ ಮಹಿಳೆ ಕೊಲೆಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಆಕೆಯ ಕಾಲಿನಲ್ಲಿದ್ದ ಬೆಳ್ಳಿ ಗೆಜ್ಜೆ ಕಾಣೆಯಾಗಿದೆ. ಇದೀಗ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.